ಪೊಲೀಸ್ ಪಬ್ಲಿಕ್ ವಸತಿ ಶಾಲೆಗೆ ಬೇಟಿ ನೀಡಿದ ಎಡಿಜಿಪಿ ಎಂ ಎ ಸಲೀಂ
ದಾವಣಗೆರೆ: ಎಡಿಜಿಪಿ ಎಂ.ಎ.ಸಲೀಂ ಅವರಿಂದು ಜಿಲ್ಲೆಯ ಕೊಂಡಜ್ಜಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ಪಬ್ಲಿಕ್ ವಸತಿ ಶಾಲೆಯ ಉದ್ಘಾಟನೆಯ ಪೂರ್ವಸಿದ್ಧತೆ ಬಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್ ಎಂ, ಪೊಲೀಸ್ ನಿರೀಕ್ಷಕರಾದ ಸತೀಶ್ ಕುಮಾರ್ ಯು., ಕಿರಣ್ ಕುಮಾರ್, ಪಿಎಸೈ ವೀರಬಸಪ್ಪ ಕುಸಲಾಪುರ ಹಾಗೂ ಪೊಲೀಸ್ ವಸತಿ ಗೃಹ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.