ದಾವಣಗೆರೆ : ಮೇ 16.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ಸಂಪೂರ್ಣವಾಗಿ ವೈಫಲ್ಯವಾಗಿದೆ. ರಾಜ್ಯದ ಜನತೆ ಗೊಂದಲದ ಸುಳಿಯಲ್ಲಿ ಸಿಲುಕಿದ್ದು, ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಆದ್ದರಿಂದ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಒತ್ತಾಯಿಸಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಶಾಲಾ ಕಾಲೇಜು ಪ್ರಾರಂಭವಾಗುವುದರ ಜೊತೆಗೆ ಮುಂಗಾರು ಸನಿಹದಲ್ಲಿರುವುದರಿಂದ ಕೃಷಿ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ಶಾಲಾ ಕಾಲೇಜು ಪ್ರವೇಶಕ್ಕೆ ಮತ್ತು ಕೃಷಿಕರ ಬೀಜ ಗೊಬ್ಬರ ಇತ್ಯಾದಿಗಳಿಗೆ ದಾಖಲಾತಿಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಜನರ ಅಲೆದಾಟ ಶುರುವಾಗಿದೆ. ರಾಜ್ಯದಲ್ಲಿ ಕಳೆದ 45 ದಿನಗಳಿಂದ ಜಾರಿಯಿದ್ದ ಚುನಾವಣೆ ನೀತಿ ಸಂಹಿತೆ ತೆರವು ಆಗಿದ್ದು, ನಿಸ್ತೇಜಗೊಂಡ ಆಡಳಿತ ಸಹಜ ಸ್ಥಿತಿಗೆ ಬಂದಿದೆ. ಇದರಿಂದ ಜನರಲ್ಲಿ ನಿರಾಳತೆ ಮೂಡಿದ್ದರು ಸಹ ಕಾಂಗ್ರೆಸ್ ಪಕ್ಷದ ಅಸ್ಪಸ್ಟತೆಯಿಂದ ಗೊಂದಲಕ್ಕೀಡಾಗಿದ್ದಾರೆ.
ಪ್ರತಿ ಮನೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ಗ್ಯಾರಂಟಿಯಿಂದ ಗ್ರಾಮೀಣ ಪ್ರದೇಶದ ಜನ ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸುತ್ತಿದ್ದಾರೆ.
ಮಹಿಳೆಯರಿಗೆ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಎಂಬ ಗ್ಯಾರಂಟಿ ಇರುವುದರಿಂದ ಮಹಿಳೆಯರು ಬಸ್ ಚಾರ್ಜ್ ಕೊಡಲು ನಿರಾಕರಿಸುತ್ತಾರೆ.
ವಾರ್ಷಿಕ ಸುಮಾರು 62 ಸಾವಿರ ಕೋಟಿ ರೂ ವೆಚ್ಚದ ಉಚಿತ ಭಾಗ್ಯಗಳ 5 ಗ್ಯಾರಂಟಿ ಕೊಟ್ಟಿದೆ ಎಂದು ಬಿ ಎಂ ಸತೀಶ್ ಹೇಳಿದ್ದಾರೆ.
