ಪೌರಕಾರ್ಮಿಕರ ನೇಮಕ, ಮಧ್ಯವರ್ತಿಗಳಿಗೆ ಮಾರುಹೋಗದೇ ಎಚ್ಚರದಿಂದಿರಿ – ಪಾಲಿಕೆ ಆಯುಕ್ತೆ ರೇಣುಕಾ
ದಾವಣಗೆರೆ; ದಾವಣಗೆರೆ ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿ, ಪರಿಶೀಲನೆ ಹಂತದಲ್ಲಿ ಇದೆ.
ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಹಾಲಿ ನೇರಪಾವತಿ, ಕ್ಷೇಮಾಭಿವೃದ್ದಿ, ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಂದ ಮಧ್ಯವರ್ತಿ, ಅನ್ಯ ವ್ಯಕ್ತಿಗಳು ಕೆಲಸ ಕೊಡಿಸುವುದಾಗಿ ತಿಳಿಸಿ, ಹಣ ವಸೂಲಿ ಮಾಡುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಈ ನೇಮಕಾತಿ ಪ್ರಕ್ರಿಯೆಯು ಸರ್ಕಾರದ ಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಅರ್ಜಿದಾರರು ಯಾವುದೇ ವ್ಯಕ್ತಿಗಳಿಗೆ ಹಣ ನೀಡಬಾರದು, ಒಂದು ವೇಳೆ ಅರ್ಜಿದಾರರು ಮಧ್ಯವರ್ತಿ, ಅನ್ಯ ವ್ಯಕ್ತಿಗಳಿಗೆ ಹಣ ನೀಡಿ ಮೋಸ ಹೋದಲ್ಲಿ ಅದಕ್ಕೆ ಪಾಲಿಕೆಯು ಜವಾಬ್ದಾರರಾಗುವುದಿಲ್ಲ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.