ಮಾರ್ಚ್ 07 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಇಂಡಸ್ಟ್ರಿಯಲ್ ಫೀಡರ್, ಮತ್ತು 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಜಿಅಂಡ್‍ಎಸ್, ತ್ರಿಶೂಲ್, ಎಮ್.ಸಿ.ಸಿ.ಬಿ ಫೀಡರ್‍ಗಳಲ್ಲಿ, ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಅಭಿವೃದ್ದಿ ಕಾಮಗಾರಿ ಮತ್ತು ಒಳಚರಂಡಿ ಪೈಪ್‍ಲೈನ್ ನಿರ್ಮಾಣದ ಕಾಮಗಾರಿಗಾಗಿ ಹಾಗೂ ಜಲಸಿರಿ ಯೋಜನೆಯಡಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.07 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇಂಡಸ್ಟ್ರಿಯಲ್ ಫೀಡರ್ ಎಪ್-13 ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ ಲೋಕಿಕೆರೆ ರಸ್ತೆ, ಲಿತಾ ಇಂಟರ್ ನ್ಯಾಷನಲ್ ಸ್ಕೂಲ್, ಸುಬ್ರಹ್ಮಣ್ಯನಗರ, ಎಸ್.ಎ .ರವೀಂದ್ರನಾಥ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಜಿ. ಅಂಡ್‍ಎಸ್ ಫೀಡರ್ ವ್ಯಾಪ್ತಿಯ ಪಿ.ಬಿ. ರಸ್ತೆ, ಅಪೂರ್ವ ಹೋಟಲ್, ಬಿಲಾಲ್ ಕಂಪೌಂಡ್, ಬಾಟ ಶೋ ರೂಮ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತ್ರಿಶೂಲ್ ಫೀಡರ್ – ಪಿ ಬಿ ರೋಡ್, ರಿಲಯನ್ಸ ಮಾರ್ಕೆಟ್, ಸುಲ್ತಾನ್ ಡೈಮೈಂಡ್ಸ್, ಕೆಎಸ್‍ಆರ್‍ಟಿಸಿ ಬಸ್ಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳು. ಎಮ್.ಸಿ.ಸಿ.ಬಿ, ಎಫ್2 ಫೀಡರ್‍ನ ವ್ಯಾಪ್ತಿಯ ಎಸ್. ಎಸ್ ಲೇಔಟ್ ಎ ಬ್ಲಾಕ್, ಎಸಿಬಿ ಕಛೇರಿ ರಸ್ತೆ, ಅಂಗವಿಕ¯ ಸ್ಕೂಲ್, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.