ವಿವಿಧೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ : ನಗರ ಉಪವಿಭಾಗ-2 ರ ವ್ಯಾಪ್ತಿಯ 66/11 ಕೆವಿ ಅವರಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್15-ರವಿ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 08 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್15-ರವಿ ಫೀಡರ್ ವ್ಯಾಪ್ತಿಯ ಆವರಗೆರೆ ವಿದ್ಯುತ್ ಉಪಕೇಂದ್ರದಿಂದ ಪಿಬಿ ರಸ್ತೆ ರವಿಮಿಲ್ ಎದುರುಗಡೆ, ರೈಲ್ವೇ ಅಂಡರ್‍ಬ್ರಿಡ್ಜ್ ಹತ್ತಿರ, ಎ.ಪಿ.ಎಮ್.ಸಿ ಆವರಣ, ಶೇಖರಪ್ಪ ನಗರ ‘ಬಿ’ ಬ್ಲಾಕ್ ಒಳಗಡೆ, ಭಾರತ್ ಕಾಲೋನಿ ಗೇಟ್ ಹತ್ತಿರ, ಎ.ಪಿ.ಎಂ.ಸಿ ಎ,ಬಿ,ಸಿ ಮತ್ತು ಡಿ ಬ್ಲಾಕ್, ಕೆ.ಬಿ ನಗರ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ವಾ.ಕಾ ಮತ್ತು ಪಾ ಗ್ರಾಮೀಣ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.