ಪ್ರಸನ್ನಾನಂದಪುರಿ ಸ್ವಾಮಿಗಳಿಂದ ವಾಲ್ಮೀಕಿ ಭವನ ವೀಕ್ಷಣೆ
ದಾವಣಗೆರೆ: ನಗರದ ಬಿ.ಟಿ.ಲೇಔಟ್ ನಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನನಂದ ಪುರಿ ಸ್ವಾಮಿಗಳು ವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಭವನ ನಿರ್ಮಾಣ ವನ್ನು ಕೈಗೆತ್ತಿಕೊಳ್ಳಲಾಗಿದ್ದು. ಗುತ್ತಿಗೆದಾರರ ವೆಂಕಟರೆಡ್ಡಿ ಟೆಂಡರ್ ನೀಡಲಾಗಿದೆ ಒಟ್ಟು 10 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣವಾಗುತ್ತಿದ್ದು. ಈಗ ಸದ್ಯಕ್ಕೆ 4.90ಕೋಟಿರೂ ಮಂಜೂರಾಗಿದ್ದು ಈ ಪೈಕಿ 3.30ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಇಂಜಿನಿಯರ್ ವೆಂಕಟೇಶ್ ತಿಳಿಸಿದಾರೆ ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ ವೀರಣ್ಣ, ಹೊದಿಗೆರೆ ರಮೇಶ್, ಹದಡಿ ಹಾಲಪ್ಪ, ಹುಲಿಕಟ್ಟೆ ಶಿವಣ್ಣ,ಶಾಗಲೆ ಮಂಜುನಾಥ್, ನಾಗರಾಜ್ ಬೆಳವನೂರ, ಮಲ್ಲಾಪುರ ದೇವರಾಜ್,ಇಂಜಿನಿಯರ್ ಗಳಾದ ಪರಮೇಶ್ವರಪ್ಪ,ಪುಟ್ಟಸ್ವಾಮಿ ನಾಗರಾಜ್, ರವಿಪ್ರಕಾಶ್, ಸಮಾಜದ ಮುಖಂಡರು ಹಾಗೂ ಅಧಿಕಾರಗಳು ಇದ್ದರು