ಪ್ರತಿಯೊಬ್ಬರ ಮುಖದಲ್ಲಿ ನಗು ತರುವವನು ಛಾಯಾಗ್ರಾಹಕ ಮಾತ್ರ :ಬಸವಪ್ರಭು ಸ್ವಾಮೀಜಿ
ದಾವಣಗೆರೆ : ಛಾಯಾಗ್ರಹಣ ಕಲೆಯ ಹಳೆಯ ನೆನಪುಗಳನ್ನು ನೆನಪಿಸುವ ಕೆಲಸವನ್ನು ನಿರ್ವಹಿಸುತ್ತದೆ. ಪ್ರತಿಯೊಬ್ಬರ ಮುಖದಲ್ಲಿ ನಗುವನ್ನು ತರಿಸುವಂತಹ ವ್ಯಕ್ತಿ ಎಂದರೆ ಅದು
ಅದು ಛಾಯಾಗ್ರಾಹಕ ಮಾತ್ರ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಎಂಸಿಸಿ ಎ ಬ್ಲಾಕ್‌ನ ಓಂಕಾರ ಹುಚ್ಚನಾಗಲಿಂಗ ಸ್ವಾಮಿ ಅನಾಥಾಶ್ರಮದಲ್ಲಿ ದಾವಣಗೆರೆ ತಾಲೂಕು ಫೋಟೊ ಮತ್ತು ವೀಡಿಯೋಗ್ರಾಫಾರ್ ಸಂಘ, ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ, ಕರುನಾಡ ಸಮರ ಸೇನೆ ಸಹಯೋಗದಲ್ಲಿ ನಡೆದ ಅನಾಥಾಶ್ರಮದ ಮಕ್ಕಳಿಗೆ ಬಟ್ಟೆ, ಬೆಡ್‌ಶೀಟ್, ನೋಟ್‌ಬುಕ್, ಪೆನ್, ಕಾರ್ಡ್ಬೋರ್ಡ್, ಮಾಸ್ಕ್ ಹಾಗೂ ಅನ್ನಸಂತರ್ಪಣೆ, ಸಸಿ ನೆಡುವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಕೆಲವರು ಜೀವನದಲ್ಲಿ ಸಂತೋಷ ಸಿಗಬೇಕೆಂದು ಪಾರ್ಟಿ, ಮೋಜು ಮಸ್ತಿಗಳಿಗೆ ಹೋಗುತ್ತಾರೆ. ಇನ್ನೂ ಕೆಲವರು ಬೇಜಾರು ಎಂದು ಪ್ರೇಕ್ಷಣೀಯ ಸ್ಥಳಗಳಿಗೆ, ಹೋಟೆಲ್‌ಗಳಿಗೆ ಹೋಗಿ ಊಟ ಮಾಡುತ್ತಾರೆ. ಇವು ಕ್ಷಣಿಕ ಸುಖ ಸಂತೋಷಗಳು. ಯಾರು ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂಧಿಸಿ ಸಹಾಯ ಮಾಡುತ್ತಾರೋ ಅವರು ಸಂತೋಷದಿಂದ ಇರುತ್ತಾರೆ. ಇದ್ದವರು ಇಲ್ಲದವರಿಗೆ ನೀಡಬೇಕು. ಅದು ವಿಶೇಷ. ಯಾರು ಹೇಗೆ ಇರಲಿ ಅವರಿಗೆ ನಗಿಸುವಂತಹ ಹಾಸ್ಯ ಪ್ರವೃತ್ತಿ ಇದೆ ಅಂದರೆ ಅದು ಛಾಯಾಗ್ರಾಹಕರುಗಳಿಗೆ ಮಾತ್ರ.
ಕೊರೋನಾ ಸಂದರ್ಭದಲ್ಲಿಯೂ ಸಹಾ ದಾನಿಗಳ ಸಹಕಾರದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಈ ಸಂಘ ಮಾಡಿದೆ ಎಂದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ಕೂಡಾ ಹಲವಾರು ಸಮಾಜಮುಖಿ ಕಾರ್ಯಗಳನ್ನು ಈ ಫೋಟೋಗ್ರಾಫಾರ್ ಸಂಘ ಮಾಡುತ್ತಾ ಬಂದಿದೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಟಿವಿ, ಬೆಡ್‌ಶೀಟ್, ಹೊದಿಕೆ, ಅನ್ನ ಸಂತರ್ಪಣೆ ಮಾಡುವ ಮೂಲಕ ಸಮಾಜಸೇವೆಗೆ ಕೈಜೋಡಿಸಿದೆ. ಕೊರೋನಾ ಸಂದರ್ಭದಲ್ಲಿ ದಾನಿಗಳ ಸಹಕಾರದಿಂದ ಆಹಾರ ದಿನಸಿ ಕಿಟ್, ಆಹಾರ ಪೊಟ್ಟಣ ನೀಡುವಂತಹ ಕೆಲಸವನ್ನು ಸಂಘ ಮಾಡಿದೆ. ಇನ್ನು ಮುಂದೆಯೂ ಸಹಾ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.
ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ ಮಾತನಾಡಿ, ಫೋಟೋಗ್ರಾಫರುಗಳು ತಮ್ಮ ಒಡಲಿನಲ್ಲಿ ಕಷ್ಟ ಇಟ್ಟುಕೊಂಡಿದ್ದರೂ ನಗುಮುಖದಿಂದ ಗ್ರಾಹಕರಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ದಾನ ಮಾಡಲು ಹಣ ಅಷ್ಟೇ ಇದ್ದರೆ ಸಾಲದು, ನೀಡುವ ಒಳ್ಳೆಯ ಮನಸ್ಸು ಇರಬೇಕು. ನೀನು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡಬೇಕು. ಎಲ್ಲಾ ವರ್ಗದವರಿಗೂ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಹಲವಾರು ರೀತಿಯ ಪ್ಯಾಕೇಜ್ ನೀಡಿತು. ಆದರೆ ಫೋಟೋಗ್ರಾಫರ್‌ಗಳಿಗೆ ಯಾವುದೇ ಸಹಕಾರ ಸರ್ಕಾರದಿಂದ ಸವಲತ್ತುಗಳು ಸಿಗದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ದೇವರಮನಿ, ಸನ್‌ಶೈನ್ ಬ್ಯೂಟಿ ಪಾರ್ಲರ್‌ನ ಎಂ.ಬಿ.ಅರುಣ, ರವಿಚಂದ್ರನ್ ಸಂಘದ ಜಿಲ್ಲಾಧ್ಯಕ್ಷ ಎಂ.ಮನು, ಕನ್ನಡ ಸಮರ ಸೇನೆಯ ರಾಜ್ಯಾಧ್ಯಕ್ಷೆ ದ್ರಾಕ್ಷಾಯಣಮ್ಮ, ಸಮಾಜ ಸೇವಕ ಡಾ.ಎಂ.ಎಚ್.ಶ್ರೀನಿವಾಸ ಗುಮ್ಮನೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯ ಶಿವನಗೌಡ ಪಾಟೀಲ, ಹಾಗೂ ಸಂಘದ ಉಪಾಧ್ಯಕ್ಷ ಗಣೇಶ ಚಿನ್ನಿಕಟ್ಟಿ, ಉಪಾಧ್ಯಕ್ಷ ಕಿರಣ್ ಅಮೃತ, ಖಜಾಂಚಿ ರಾಜಶೇಖರ, ಮಾಲತೇಶ ಜಾಧವ್, ಎ.ಎಸ್.ಗಣೇಶ, ಎಸ್.ಸಂತೋಷ, ಮಲ್ಲೇಶ ಪಟೇಲ್, ಪಂಚಾಕ್ಷರಯ್ಯ, ಎಂ.ಎಸ್.ಚನ್ನಬಸವ
ಸೇರಿದಂತೆ ಪದಾಧಿಕಾರಿಗಳು ಇದ್ದರು. ಸಂತೋಷ ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು.