ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಅನ್ನೋರು ಹೋರಾಟ ಮಾಡಿದ್ರೆ ಆಗಲ್ಲ ಮತ್ತೆ ಕಚ್ಚಾಡ್ತಾರೆ – ಶಾಮನೂರು ಶಿವಶಂಕರಪ್ಪ

IMG-20210904-WA0021

 

ದಾವಣಗೆರೆ: ಸಾದರು, ಪಂಚಮಸಾಲಿ, ಗಾಣಿಗರು, ಬಣಜಿಗರು ಸೇರಿದಂತೆ ಎಲ್ಲಾ ಪಂಗಡದವರೂ ವೀರಶೈವ ಲಿಂಗಾಯತರೇ. ಇದರಲ್ಲಿ ಎರಡು ಮಾತಿಲ್ಲ. ಎಲ್ಲರನ್ನೂ ಮಹಾಸಭಾ ವೀರಶೈವ ಲಿಂಗಾಯತರೆಂದೇ ಪರಿಗಣಿಸುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಸಭಾದ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತದಲ್ಲಿ ಬರುವ ಎಲ್ಲಾ ಒಳಪಂಗಡಗಳು ಒಂದೇ ಎಂಬ ನಿಲುವು ಮಾತ್ರ ಅಚಲ. ಇದರಲ್ಲಿ ಬದಲಾವಣೆ ಇಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎನ್ನುವವರು ಹೋರಾಟ ಮಾಡಿದರೆ ಅದೇನು ಆಗುವುದಿಲ್ಲ. ಅವರೆಲ್ಲಾ ಮತ್ತೆ ಕಚ್ಚಾಡುತ್ತಾರಷ್ಟೆ. ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಹೇಳಿದರು.

ಶಾಸಕ ಎಂ.ಬಿ. ಪಾಟೀಲ್ ’ಅವನೇನೂ ಪ್ರತ್ಯೇಕ ಧರ್ಮ ಮಾಡಲು ಹೋಗ್ತಾನೆ, ಅದು ಅವನ ಹಣೆಬರಹ. ಹಾಗೆ ಮಾಡಲು ಮುಂದಾದರೆ ಏನಾಗುತ್ತದೆ ಅಂತಹವರ ಸರ್ವನಾಶವಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿರುವುದನ್ನು ಉಲ್ಲೇಖಿಸಿ ತಿಳಿಸಿದರು.

ಯಡಿಯೂರಪ್ಪ ಅವರ ನಂತರ ಎಂ. ಬಿ. ಪಾಟೀಲ್ ಲಿಂಗಾಯತ ನಾಯಕರಾಗಲು ಹೊರಟಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಂ.ಬಿ. ಪಾಟೀಲ್ ಮೊದಲು ಅವರ ಊರಲ್ಲಿ ನಿಂತು ಗೆದ್ದು ಬರಲಿ ಎಂದು ಕುಟುಕಿದರು.

ನಾಯಕರಾಗಬೇಕು ಅಂತಾ ಬಹಳ ಜನ ಹೋಗುತ್ತಾರೆ. ಆದರೆ ಎಲ್ಲರೂ ನಾಯಕರಾಗಲು ಸಾಧ್ಯವಿಲ್ಲ. ನಾನು ನಾಯಕನಾಗಬೇಕೆಂದರೆ ಆಗುತ್ತಾ. ಜನರು ನಾಯಕರೆಂದು ಆರಿಸಿ, ಒಪ್ಪಿಕೊಳ್ಳಬೇಕು. ಜನರು ಇವರು ನಮ್ಮ ನಾಯಕರು ಎಂದು ಹೇಳಿದಾಗ ನಾಯಕರಾಗುವುದು ಎಂದು ಶಾಮನೂರು ಅಭಿಪ್ರಾಯಪಟ್ಟರು.

ಎಸ್.ಎ. ಜಾಮದಾರ್ ಅವರು ಲಿಂಗಾಯತ ಧರ್ಮ ಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಶಾಮನೂರು, ಜಾಮದಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಜಾಮದಾರ್ ಹೆಸರು ಹೇಳಬೇಡಿ, ಅದೊಂದು ಸವಕಲು ನಾಣ್ಯ. ಸುಮ್ಮನೆ ಮಾತನಾಡುತ್ತಿರುತ್ತಾರಷ್ಟೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!