ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

ಬೆಂಗಳೂರು: ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜಯನಗರದ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಎರಡು ಗಂಡು ಮಕ್ಕಳಿಗೆ ಅಮೂಲ್ಯ ಜನ್ಮ ನೀಡಿದ್ದು, ತಾಯಿ-ಮಕ್ಕಳಿಬ್ಬರು ಆರೋಗ್ಯದಿಂದ ಇದ್ದಾರೆ ಎಂದು ಅಮೂಲ್ಯ ಅವರ ಮಾವ ಹಾಗೂ ಬಿಜೆಪಿ ಮುಖಂಡ ರಾಮಚಂದ್ರ ತಿಳಿಸಿದ್ದಾರೆ. ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆನ್ನುವ ಸುದ್ದಿ ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಅಮೂಲ್ಯ ಪ್ರಗ್ನೆಂಟ್ ಆಗಿರುವ ಸುದ್ದಿ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಟ್ರೋಲಿಗರ ಮಿಶ್ರಪ್ರತಿಕ್ರಿಯೆಗೂ ಕಾರಣವಾಗಿತ್ತು. ಅಮೂಲ್ಯ ತಾಯಿಯಾದ ವಿಚಾರ ಚಿತ್ರರಂಗದಲ್ಲಿ ಯಾವೊಬ್ಬ ನಟಿ ತಾಯಿಯಾದಷ್ಟು ಪ್ರಮಾಣದಲ್ಲಿ ಸುದ್ದಿಯಾಗಿರಲಿಲ್ಲ. ಇದಕ್ಕೆ ಖುದ್ದು ರಾಮಚಂದ್ರ ಅವರ ಕುಟುಂಬವೇ ಮುಜುಗರ ಅನುಭವಿಸುವಂತಾಗಿತ್ತು.. ಅವಳಿ ಮಕ್ಕಳ ಜನನದ ಸುದ್ದಿಯನ್ನು ಅಮೂಲ್ಯ ಪತಿ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾರೆ. ಇನ್ನು ವಾರದೊಳಗೆ ಅಮೂಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.