ಗರ್ಭಿಣಿಯರು’ ಅಂಗನವಾಡಿಗೆ ಬಂದು ಊಟ ಮಾಡೋಕಾಗುತ್ತಾ? ಸಚಿವರ ವಿರುದ್ಧ `ಸ್ಪೀಕರ್ ಕಾಗೇರಿ’ ಗರಂ

ಬೆಂಗಳೂರು : ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಟಿಕ ಆಹಾರ ಪಡೆದುಕೊಳ್ಳಬೇಕಾದ ಆದೇಶಕ್ಕೆ ಸ್ವತಃ ಸ್ಪೀಕರ್ ಕಾಗೇರಿ ಗರಂ ಆಗಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಶೃಂಗೇರಿ ಶಾಸಕ ರಾಜೇಗೌಡ ‘ಸರ್ಕಾರದ ಈ ನಿಯಮದಿಂದ ಮಲೆನಾಡು ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು ಎರಡು ಮೂರು ಕಿ.ಮೀ ಮೀಟರ್ ಊಟಕ್ಕಾಗಿ ಹೋಗಬೇಕಾಗುತ್ತದೆ. ಕಚ್ಚಾ ರಸ್ತೆಯಲ್ಲಿ ವಾಹನದಲ್ಲಿ ಗರ್ಭಿಣಿಯರು ನಿತ್ಯ ಊಟಕ್ಕಾಗಿ ಅಂಗನವಾಡಿ ಕೇಂದ್ರಕ್ಕೆ ಬರಲು ಸಾಧ್ಯನಾ?’ ಎಂದು ಪ್ರಶ್ನಿಸಿದರು.

ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಳಪ್ಪ ಆಚಾರ್ ‘ ಪೌಷ್ಟಿಕ ಆಹಾರವನ್ನು ಮನೆಗೆ ನೀಡಲಾಗುತ್ತಿತ್ತು. ಆದರೆ ಗರ್ಭಿಣಿಯರಿಗೆ ಕೊಡುವ ಪೌಷ್ಟಿಕ ಆಹಾರ ಅವರಿಗೆ ಲಭ್ಯವಾಗಲ್ಲ, ಬದಲಾಗಿ ಮನೆಯಲ್ಲಿ ಇದ್ದವರು ಹಂಚಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ವರದಿ ಆಧಾರದಲ್ಲಿ 2017 ರಲ್ಲಿ ನಿಯಮ ಬದಲಾವಣೆ ಮಾಡಲಾಗಿದೆ’ ಎಂದು ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ‘ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಿಕೊಂಡು ಬರಬೇಕು ಎಂದರೆ ಹೇಗೆ? ಅದು ಸಾಧ್ಯ ಆಗುತ್ತಾ ಇಲ್ಲವೋ ಎಂಬುದು ಸಾಮಾನ್ಯ ಜ್ಞಾನಕ್ಕೂ ಬರುವುದಿಲ್ಲವೇ?. ಕಾಮನ್ ಸೆನ್ಸ್ ಇರುವವರು ಸರ್ಕಾರದಲ್ಲಿ 2017 ರಲ್ಲಿ ಇಂತಹ ಆದೇಶ ಮಾಡುತ್ತಿ ರಲಿಲ್ಲ’ ಎಂದು ಗರಂ ಆದರು. ಯಾವ ವರದಿ ಯಾವ ಕಾರಣಕ್ಕಾಗಿ ಕೊಟ್ಟಿದ್ದಾರೋ ಗೊತ್ತಿಲ್ಲ. ಬಾಣಂತಿಯರು ಹಾಸಿಗೆಯಿಂದ ಏಳಲು ಎಷ್ಟು ಸಮಯ ಬೇಕು ಎಂದು ಗೊತ್ತಿದೆ ನಮಗೆಲ್ಲಾ. ಅವರಿಗೆ ಅಂಗನವಾಡಿ ಬಂದು ಊಟ ಮಾಡಿ ಹೋಗಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಇದು ಸ್ವಾರ್ಥ ವರದಿ ಇರಬಹುದು. ಸರಿ ಮಾಡಿ ಎಂದು ಸಚಿವ ಹಾಲಪ್ಪ ಆಚಾರ್‌ಗೆ ಸೂಚನೆ ನೀಡಿದ ಸ್ಪೀಕರ್ ಕಾಗೇರಿ, ಕೇಂದ್ರದ ಗೈಡ್ ಲೈನ್ ಏನಾದರೂ ಇದ್ದರೆ ಅವರಿಗೆ ಬರೆಯಿರಿ. ಕೇಂದ್ರದಲ್ಲಿ ಕೂತುಕೊಂಡವರಿಗೆ ವ್ಯವಹಾರಿಕ ಜ್ಞಾನ ಇಲ್ಲವೇ? ಸೀರಿಯಸ್ಸಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!