ಸೇವೆ ಖಾಯಂಗೊಳಿಸಲು ಒತ್ತಾಯಿಸಿ ನೀರು ಸರಬರಾಜು ಕಾರ್ಮಿಕರಿಂದ ಪ್ರತಿಭಟನೆ
ದಾವಣಗೆರೆ : ಸೇವೆ ಖಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ನೀರು ಸರಬರಾಜು ಕಾರ್ಮಿಕರು ಮಹಾನಗರ ಪಾಲಿಕೆ ಮುಂಭಾಗ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಎಲ್ಲಾ ಗುತ್ತಿಗೆ ಹೊರಗತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ನೀರು ಸರಬರಾಜು ವಿಭಾಗದ ಕಾರ್ಮಿಕರು ಸೇವೆಯನ್ನು ಖಾಯಂ ಮಾಡಬೇಕು. ಖಾಯಂಗೊಳಿಸುವ ಕನಕ ಎಲ್ಲಾ ಗುತ್ತಿಗೆ ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎಲ್ಲಾ ಕಾರ್ಮಿಕರಿಗೆ ದಿನದಲ್ಲಿ ಎಂಟು ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ಧ ವೇತನ ವಾದದ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ ಹಬ್ಬಗಳ ರಜೆ, ಗಳಿಕೆ, ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ / ಮರಣ ಹೊಂದುವ ಸ್ಥಳೀಯ ಸಂಸ್ಥೆಗಳ, ಕಾರ್ಮಿಕರು ಅವಲಂಬಿತರಿಗೆ ಉಪಧನ ನೀಡುವ ಸಂಬಂಧ ಸ್ಪಷ್ಟವಾದ ಆದೇಶ ಹೊರಡಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.
ಗುತ್ತಿಗೆದಾರರು ಕಾರ್ಮಿಕರರಿಂದ ಕಟಾಯಿಸಲಾದ ಪಿ.ಎಫ್. ಹಾಗು ಇ.ಎಸ್.ಐ. ಗಳನ್ನು ಸರಿಯಾಗಿ ಪಾವತಿಸದೇ ಹಲವೆಡೆ ಹಗರಣಗಳು ನಡೆದಿವೆ. ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸುವಂತೆ ಒತ್ತಾಯಿಸಲಾಯಿತು.
ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರು ಸರಬರಾಜು ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತಿತರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶವನ್ನು ನೀಡಬೇಕು ಎಂದು ಆಗ್ರಹಿಸಲಾಯಿತು.
ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಹೊರಗುತ್ತಿಗೆ ಆಧಾರಿತ ನೀರು ಸರಬರಾಜು ವಿಭಾಗದ ಎಲ್ಲಾ ನೌಕರರುಗಳನ್ನು ಪೌರ ನೌಕರನೆಂದು ಪರಿಗಣಿಸಿ ಈ ತಕ್ಷಣದಿಂದ ನೇರ ಪಾವತಿಯಡಿಯಲ್ಲಿ ತಂದು ಸಮಾನ ಕಟುಶಕ್ತಿ, ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಲಾಯಿತು.