ದಾವಣಗೆರೆಯಲ್ಲಿ ಕಲ್ಲು ತೂರಾಟಕ್ಕೆ ಪ್ರಚೋದನಕಾರಿ ಭಾಷಣ.! ಸತೀಶ್ ಪೂಜಾರ್ ನ್ಯಾಯಾಂಗ ಬಂಧನ

ದಾವಣಗೆರೆ: ಪ್ರಚೋದನಕಾರಿ ಭಾಷಣ ಹಿನ್ನೆಲೆ, ದಾವಣಗೆರೆಯ ಹಿಂದೂ ಜಾಗರಣಾ ವೇದಿಕೆಯ ಸತೀಶ್ ಪೂಜಾರಿ ಸೇರಿದಂತೆ ಹಲವರನ್ನು ದಾವಣಗೆರೆಯ ಬಸವನಗರ ಪೊಲೀಸರು ವಶಕ್ಕೆ ಪಡೆದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾವಣಗೆರೆ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ಪೂಜಾರ್ ಭಾಷಣ ಮಾಡಿದ್ದರು,ಇದೇ ವಿಚಾರಕ್ಕೆ ಗಣಪತಿ ಮೆರವಣಿಗೆ ವೇಳೆ ಎರಡು ಕೋಮಿನ ನಡುವೆ ಕಲ್ಲು ತೂರಾಟ ನಡೆದಿತ್ತು.ಘಟನೆಗೆ ಸತೀಶ್ ಪೂಜಾರ್ ಭಾಷಣವೇ ಕಾರಣ ಎಂದು ಕೆಲವರು ಆರೋಪಿಸಿ ದೂರು ನೀಡಿದ್ದರು,ಘಟನೆ ಸಂಬಂಧ ಸತೀಶ್ ಪೂಜಾರ್ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಶನಿವಾರ ಶಿವಮೊಗ್ಗದ ಸಾಗರದಲ್ಕಿದ್ದ ಸತೀಶ್ ಪೂಜಾರ್ ಅವರನ್ನು ದಾವಣಗೆರೆಯ ಬಸವನಗರ ಪೊಲೀಸರು ಬಂಧಿಸಿ ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿತ್ತು, ಸತೀಶ್ ಪೂಜಾರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಲ್ಲ ತೂರಾಟದ ಘಟನೆಗೆ ಸಂಬಂಧಿಸಿದಂತೆ ಎರಡೂ ಕೋಮಿನ ಒಟ್ಟಾರೆ 50 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದ್ದು ಸಧ್ಯ ದಾವಣಗೆರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡ ಶಾಂತಿಯುತ ವಾತಾವರಣ ಏರ್ಪಟ್ಟಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!