ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ನರೇಂದ್ರ ಬಾಬು ಲಂಚಾವಾತಾರ ಬಯಲು

ದಾವಣಗೆರೆ: ದಾವಣಗೆರೆ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ನರೇಂದ್ರ ಬಾಬು ಲಂಚಾವಾತಾರ ಇದೀಗ ಬಯಲಾಗಿದೆ.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮತ್ತು ಗುತ್ತಿಗೆದಾರರು ರಹಸ್ಯ ಕಾರ್ಯಾಚರಣೆ ನಡೆಸಿ ಭ್ರಷ್ಟಾಧಿಕಾರಿಯನ್ನು ಬಯಲಿಗೆಳದಿದ್ದಾರೆ. ಗುತ್ತಿಗೆದಾರರೊಬ್ಬರ ಬಿಲ್ ಪಾಸ್ ಮಾಡಲು ಈ ಸಹಾಯಕ ಕಾರ್ಯಪಾಲಕ ಅಭಿಯಂತರ ಲಂಚ ಕೇಳಿದ್ದಾರೆ. ವಿಶೇಷ ಅಂದರೆ ಯಾವ ಅಂಜಿಕೆ ಇಲ್ಲದೆ ಖಡಕ್ಕಾಗಿ ಇಷ್ಟೇ ಹಣ ಕೊಡಬೇಕೆಂಬ ಅವಾಜ್ ದೃಶ್ಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಚಿತ್ರ ಅಂದರೆ ನಾವು ಕೂಡಾ ಲಕ್ಷಾಂತರ ಹಣ ಸುರಿದು ಈ ಸ್ಥಾನಕ್ಕೆ ಬರುತ್ತೇವೆ ಎಂಬ ಹೇಳಿಕೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರೋದಂತೂ ಸತ್ಯ,.
ಇನ್ನು ಇತ್ತೀಚೆಗಷ್ಟೇ ದಾವಣಗೆರೆ ಮಹಾನಗರ ಪಾಲಿಕೆಯ ಆಧಿಕಾರಿ ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ನಂತರ ವಿಶೇಷ ಭೂ ಸ್ವಾಧೀನಾಧಿಕಾರಿ ಶೇಖರ್ ಮತ್ತು ಫೋಕ್ಸೋ ಕಾಯ್ದೆಯಲ್ಲಿ ಲಂಚ ಪಡೆಯುತ್ತಿದ್ದ ಸ್ಪೆಷಲ್ ಪಿಪಿ ರೇಖಾ ಕೂಡಾ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದರು. ಸರ್ಕಾರ ಮಾತ್ರ ಕಠಿಣ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಮುಖ್ಯಮಂತ್ರಿಗಳು ಸಂಬಂದಪಟ್ಟ ಸಚಿವರು ತಕ್ಷಣ ಕ್ರಮಕೈಗೊಳ್ಳಬೇಕು. ಇನ್ನು ಲೋಕಾಯುಕ್ತರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷ ಒತ್ತಾಯಿಸಿದರು.