ವಾರ್ಷಿಕ ಪರೀಕ್ಷೆ’ಯಲ್ಲೂ ‘ಪುನೀತ್ ರಾಜ್ ಕುಮಾರ್’ ಕುರಿತ ಪಾಠ!

ಬೆಂಗಳೂರು: ಈಗಾಗಲೇ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಅವರು ನಿಧನವಾದ ನಂತರ ಅಮರವಾಗಿಸುವ ನಿಟ್ಟಿನಲ್ಲಿ, ವೃತ್ತ, ರಸ್ತೆಗಳಿಗೆ ಅವರ ಹೆಸರನ್ನು ಇಡಲಾಗಿದೆ. ಇದಲ್ಲದೇ ಉಪಗ್ರಹಕ್ಕೂ ಅವರ ಹೆಸರನ್ನು ಇಡಲಾಗಿತ್ತು. ಈಗ 4ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿಯೂ ಅಪ್ಪು ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಬೆಂಗಳೂರಿನ ವಿಜಯನಗರ ಬಳಿಯ ಆರ್‌ಪಿಸಿ ಲೇಔಟ್‌ನಲ್ಲಿರುವಂತ ದಿ ನ್ಯೂ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯಲ್ಲಿ ಇದೇ ಮಾರ್ಚ್ 2022ರಲ್ಲಿ 4ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಮಕ್ಕಳಿಗೆ ನೀಡಲಾಗಿದ್ದಂತ ವಾರ್ಷಿಕ ಪರೀಕ್ಷೆಯಲ್ಲಿ, ಪುನೀತ್ ರಾಜ್ ಕುಮಾರ್ ಕುರಿತಂತೆ ಪ್ರಶ್ನೆ ಕೇಳಲಾಗಿದೆ.

ಐಸಿಎಸ್‌ಇ ಪಠ್ಯಕ್ರಮದ 4ನೇ ತರಗತಿ ವಿದ್ಯಾರ್ಥಿಗಳ 2ನೇ ಭಾಷೆಯಾದಂತ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತಂತೆ ಗದ್ಯ ಭಾಗವನ್ನು ನೀಡಿ ಪ್ರಶ್ನೆ ಕೇಳಲಾಗಿದೆ. ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಾ ಇದ್ದರು.? ಅವರು ಯಾವಾಗ ಜನಿಸಿದರು..? ಅವರ ತಂದೆ ಹೆಸರೇನು.? ಎಂಬುದು ಸೇರಿದಂತೆ ಅವರ ಕುರಿತಾದ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!