ಲೈಫ್ ಬಾಯ್ ಸೋಪಿನಲ್ಲಿ ಅರಳಿದ ಪುನೀತ್
ಮಂಗಳೂರು : ಗುರುವಾರ ಕನ್ನಡ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 47ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅಗಲಿದ ನಟನ ಕೊನೆಯ ಚಿತ್ರ ‘ಜೇಮ್ಸ್’ ವೀಕ್ಷಣೆ ಮಾಡುವ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ವಿಭಿನ್ನವಾಗಿ ಪುನೀತ್ ರಾಜ್ ಕುಮಾರ್ ಕುರಿತ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇವುಗಳ ಪೈಕಿ ಮಂಗಳೂರಿನಲ್ಲಿರುವ ಅಪ್ಪಟ ಅಪ್ಪು ಅಭಿಮಾನಿಯೊಬ್ಬ ಲೈಫ್ ಬಾಯ್ ಸೋಪಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಮಂಗಳೂರಿನ ಗಣೇಶಪುರದ ಕಲಾವಿದ ದೇವಿಕಿರಣ್ ಬೇರೆ ಸೋಪ್‌ನಿಂದ ಅವರು ಅಪ್ಪು ಚಿತ್ರ ರಚಿಸಲು ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಆ ಬಳಿಕ ಲೈಫ್ ಬಾಯ್ ಸೋಪ್‌ನಿಂದ ಅಪ್ಪು ಚಿತ್ರ ಮಾಡಿ ಯಶಸ್ಸು ಕಂಡಿದ್ದಾರೆ. ಅಪ್ಪು ಚಿತ್ರ ರಚನೆಯ ವೀಡಿಯೋವನ್ನು ದೇವಿಕಿರಣ್ ಬುಧವಾರ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.