ಕೂದಲು ಗಡ್ಡ ಟ್ರಿಮ್ ಮಾಡಿಸಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ
ನವದೆಹಲಿ: ಉದ್ದ ತಲೆ ಕೂದಲು ಮತ್ತು ಗಡ್ಡ ಬಿಡುವ ಮೂಲಕ ಭಾರತ್ ಜೋಡೊ ಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೇಂಬ್ರಿಡ್ಜ್ (Cambridge) ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಿರುವ ಅವರು ಹೊಸ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ್ ಜೋಡೊ ಯಾತ್ರೆ ಬಳಿಕವೂ ಗಡ್ಡ, ಕೂದಲಿನ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ರಾಹುಲ್ ಗಾಂಧಿ ಲಂಡನ್‌ಗೆ ತೆರಳುವ ಮುನ್ನ ಕತ್ತರಿ ಹಾಕಿದ್ದಾರೆ. ಕಟ್ಟಿಂಗ್ ಜೊತೆಗೆ ಗಡ್ಡವನ್ನು ಟ್ರೀಮ್ ಮಾಡಿದ್ದು ಮತ್ತದೇ ಅವರ ಹ್ಯಾಂಡಸಮ್ ಲುಕ್‌ಗೆ ಮರಳಿದ್ದಾರೆ.
ಒಂದು ವಾರದ ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮತ್ತು ಮಾ. 5ರಂದು ಲಂಡನ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಲಂಡನ್‌ನಲ್ಲಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಸದಸ್ಯರನ್ನು ಭೇಟಿಯಾಗಲಿದ್ದಾರೆ. ತದನಂತರ ಅವರು ವ್ಯಾಪಾರ ಸಮುದಾಯದ ಸದಸ್ಯರೊಂದಿಗೆ ಸರಣಿ ಸಂವಾದ ನಡೆಸಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.