ರೈಲ್ವೆ ಪೊಲೀಸ್ ನಾಗರಾಜ್ ಅವರಿಗೆ ಸನ್ಮಾನ
ದಾವಣಗೆರೆ : ರೈಲ್ವೇ ನಿಲ್ದಾಣದಲ್ಲಿ ನೈರುತ್ಯ ರೈಲ್ವೇ ಪ್ರಯಾಣಿಕರ ಸಂಘ ಹಾಗು ನಮ್ಮ ದಾವಣಗೆರೆ ತಂಡದ ವತಿಯಿಂದ ರೈಲ್ವೇ ಪೊಲೀಸ್ ನಾಗರಾಜ ಅವರನ್ನು ಸನ್ಮಾನಿಸಲಾಯಿತು. ರೈಲ್ವೇ ಪೋಲಿಸ್ ನಾಗರಾಜ ಇತ್ತೀಚಿಗೆ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ವ್ಯಕ್ತಿಯೊಬ್ಬರು ಬಿದ್ದು ಪ್ರಾಣ ಕಳೆದು ಕೊಳ್ಳುತ್ತಿದ್ದರು. ನಾಗರಾಜ್ ಅವರ ಚಾಕಚಕ್ಯತೆಯಿಂದ ಆ ವ್ಯಕ್ತಿ ಬದುಕುಳಿದರು. ತಮ್ಮ ಜೀವದ ಹಂಗು ತೊರೆದು ನಾಗರಾಜ್ ಆ ವ್ಯಕ್ತಿಯನ್ನು ರಕ್ಷಿಸಿದ್ದರು.
ಇದೇ ರೀತಿ ನಾಗರಾಜ್ ಅವರು ಸುಮಾರು ಸಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಸೀಕೆರೆ ರೈಲ್ವೇ ನಿಲ್ದಾಣದಲ್ಲಿಯೂ ಹಲವು ಜನರ ಪ್ರಾಣವನ್ನು ಉಳಿಸಿದ್ದಾರೆ. ಆದರೆ ಆ ಸ್ಥಳಗಳಲ್ಲಿ ಸಿಸಿ ಟಿವಿ ಇರದ ಕಾರಣ ಇವರ ಸಾಹಸ ಬೆಳಕಿಗೆ ಬಂದಿಲ್ಲ. ಇಂತಹ ಸಾಹಸಿ ಹಾಗೂ ಮಾನವೀಯ ಗುಣಗಳುಳ್ಳ ವ್ಯಕ್ತ್ತಿ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಮುಸ್ತಾಕ್ ಅಹಮ್ಮದ್, ನಾಗರಾಜ ಹಾಗೂ ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ನಮ್ಮ ದಾವಣಗೆರೆ ತಂಡದಿದ ರೋಹಿತ ಜೈನ್, ಸಂತೋಷ್ ಸವೂರ್, ಶಿವಯೋಗಿ, ನಿಧಿ, ಇಂದರ್ಮಲ್ ಜೈನ್, ಸುನಿಲ್ ಬಾಗೇವಾಡಿಯವರು ಭಾಗವಹಿಸಿ ಸನ್ಮಾನಿಸಿದರು.