Rain Dead Pigs on Road: ಭಾರಿ ಮಳೆ, ರಸ್ತೆಯ ಮಧ್ಯದಲ್ಲಿ ತೇಲಿ ಬಂದ ಹಂದಿಗಳ ಮೃತದೇಹ, ವಾಹನ ಸವಾರರಿಗೆ ಕಿರಿಕಿರಿ

-
ದಾವಣಗೆರೆ: ನಿನ್ನೆ ಸತತ ಎರಡು ಗಂಟೆಗಳ ಕಾಲಸುರಿದ ಭಾರಿ ಮಳೆಗೆ ನಗರದಲ್ಲಿ ಹತ್ತಾರು ಹಂದಿಗಳು ಮೃತಪಟ್ಟಿವೆ.
ದಾವಣಗೆರೆಯ ಆರ್ ಎಂಸಿ ಲಿಂಕ್ ರೋಡ್ ನಲ್ಲಿ ಹಂದಿಗಳ ಮೃತದೇಹಗಳು ತೇಲಿ ಬಂದಿದ್ದು, ರಸ್ತೆಯ ಮಧ್ಯದಲ್ಲಿ ತೇಲಿ ಬಂದ ಹಂದಿಗಳ ಮೃತದೇಹದಿಂದ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿತು.
ಹತ್ತಕ್ಕೂ ಹೆಚ್ಚು ಹಂದಿಗಳು ಮಳೆಯಿಂದ ಸಾವನ್ನಪ್ಪಿದ್ದು, ಪಾಲಿಕೆ ಸದಸ್ಯ ಜಗದೀಶ್ ಆತನ ಸ್ನೇಹಿತರಾದ ಭರತ್ ಕಾಲೋನಿ ಯುವಕರು ತೆರವು ಕಾರ್ಯ ನಡೆಸಿದರು.