ಮಳೆ ಅವಾಂತರ ; ಪರಿಸ್ಥಿತಿ ಅವಲೋಕಿಸಿದ ರಾಜ್ಯ ಮುಖ್ಯ ಕಾರ್ಯದರ್ಶಿ

IMG-20211026-WA0071

ಬೆಂಗಳೂರು: ಕಳೆದ 15 ದಿನಗಳಿಂದ ನಿರಂತರ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ನಗರದ ಮೂಲಸೌಕರ್ಯ ಹಾಳಾಗಿದ್ದು, ಇದಕ್ಕಾಗಿ ಬಿಬಿಎಂಪಿ, ಸ್ಮಾರ್ಟ್ ಸಿಟಿ, ಮೆಟ್ರೋ, ಬೆಸ್ಕಾಂ ಮತ್ತು ಜಲಮಂಡಳಿಗಳ ಮಧ್ಯೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ಅವರು ಸೂಚಿಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ *ಶ್ರೀ ರವಿಕುಮಾರ್* ಅವರು ಮಳೆಯಿಂದ ಹಾನಿಗೊಳಗಾದ ಹಲವಾರು ಪ್ರದೇಶಗಳ ರಸ್ತೆ ಮತ್ತಿತರ ಮೂಲಸೌಕರ್ಯವನ್ನು ಪರಿವೀಕ್ಷಣೆ ನಡೆಸಿದರು.

ಪರಿವೀಕ್ಷಣೆ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಶ್ರೀ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಶ್ರೀ ಗೌರವ ಗುಪ್ತಾ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯ ಇಂಜಿನಿಯರ್ ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!