Rain Harvesting: ತಗ್ಗು ಪ್ರದೇಶದ ಮನೆಗಳಲ್ಲಿ ಮಳೆ ನೀರು.! ಮಳೆ ಕೊಯ್ಲು ಜಾಗೃತಿ ಮೂಡಿಸುವಂತೆ ಪಾಲಿಕೆಗೆ ಸಲಹೆ – ಎಂ ಜಿ ಶ್ರೀಕಾಂತ್

ದಾವಣಗೆರೆ: ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕೆಲವು ಕಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಲ್ಲಿ ನೀರು ನುಗ್ಗುತ್ತಿದೆ, ಕೆಲವರು ನೀರು ಹೊರಹೋಗಲು ಅಳವಡಿಸಿರುವ ಪೈಪ್ ಅಳವಡಿಸಿದ್ದು, ಈ ನೀರು ಕೆಳಭಾಗದ ಮನೆಗಳಿಗೆ ನುಗ್ಗುತ್ತಿದೆ. ಶಂಕರ್ ವಿಹಾರ ಬಡಾವಣೆ, ಎಸ್.ಎಸ್. ಎಂ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಕಾರಣ ಜನರು ಪರದಾಡುವಂತಾಗಿದೆ.
ವರುಣಾರ್ಭಟಕ್ಕೆ ಈಗಾಗಲೇ ಲಕ್ಷಾಂತರ ರೂ., ಬೆಳೆ ಹಾನಿ ಸಂಭವಿಸಿದ್ದು, ಹಲವೆಡೆ ಮನೆಗಳು ಬಿದ್ದಿವೆ. ಕೆಲವು ಭಾಗಶಃ ಹಾನಿಯಾಗಿವೆ. ವರುಣಾರ್ಭಟಕ್ಕೆ ಈಗಾಗಲೇ ಜನರು ಕಂಗಾಲಾಗಿ ಹೋಗಿದ್ದು, ಈ ಮಳೆ ಮತ್ತಷ್ಟು ಹಾನಿ ಮಾಡುವ ಸಂಭವವಿದೆ.