Rain Road’s Became Lake: ದಾವಣಗೆರೆ ನಗರದಲ್ಲಿ ಸುರಿಯುತ್ತಿರುವ ಭಾರಿ‌‌‌ ಮಳೆ: ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ

ದಾವಣಗೆರೆ:  ದಾವಣಗೆರೆಯ ಈರುಳ್ಳಿ ಮಾರುಕಟ್ಟೆ ಬಳಿ, ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಬೈಕ್ ಸವಾರನೊಬ್ಬ ಚರಂಡಿಗೆ ಬೈಕ್ ಬೀಳಿಸಿಕೊಂಡಿರುವ ಘಟನೆ ನಡೆದಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ದಾವಣಗೆರೆ ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ‌‌‌ ಮಳೆಯಿಂದಾಗಿ ರಸ್ತೆಗಳೆಲ್ಲ ಕೆರೆಗಳಾಗಿ ಮಾರ್ಪಟ್ಟಿವೆ. ಇದರಿಂದ ನಗರದ ಮುಖ್ಯ ರಸ್ತೆಗಳಲ್ಲಿ ಮೂರು ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಅದರಂತೆ ನಗರದ ಈರುಳ್ಳಿ ಮಾರುಕಟ್ಟೆಯ ರಸ್ತೆ ಕೂಡ ನೀರಿನಿಂದ ತುಂಬಿದ್ದು ರಸ್ತೆ ಯಾವುದು ಚರಂಡಿ ಯಾವುದು ಎಂಬ ಅನುಮಾನದಲ್ಲಿ ಸವಾರರಿದ್ದಾರೆ. ಇದೆ ಸಂದರ್ಭದಲ್ಲಿ ಮೂರು ನಾಲ್ಕು ಅಡಿಗಳು ನೀರು ತುಂಬಿದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ರಸ್ತೆ ದಾಟಿಸಲು ಮುಂದಾದಾಗ ರಸ್ತೆಯ ಪಕ್ಕದಲ್ಲಿ ಇದ್ದ ಚರಂಡಿಗೆ ಬೈಕ್ ಬಿದ್ದಿದೆ. ಇನ್ನೇನು ಬೈಕ್ ಮುಳುಗಬೇಕು ಅನ್ನುವಷ್ಟರಲ್ಲಿ ಸ್ಥಳದಲ್ಲಿದ್ದ ಜನರು ಬೈಕ್ ಸವಾರರನ್ನ ಕಾಪಾಡಿದ್ದರಲ್ಲದೆ, ಬೈಕನ್ನ ಮೇಲೆತ್ತಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಒಟ್ಟಾರೆ ದಾವಣಗೆರೆ ನಗರದ ಈರುಳ್ಳಿ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಓಡಾಡಲು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ….

Leave a Reply

Your email address will not be published. Required fields are marked *

error: Content is protected !!