Accident: ಕಾರುಗಳು ಮಧ್ಯೆ ಡಿಕ್ಕಿ, ಇಬ್ಬರಿಗೆ ಗಾಯ: ಅಪಘಾತಕ್ಕೆ ಕಾರಣವಾಯ್ತಾ ಮಳೆ ನೀರು.!

ದಾವಣಗೆರೆ: ಕಾರ್ ಗಳ ಮಧ್ಯ ಪರಸ್ಪರ ಡಿಕ್ಕಿ ಸಂಭವಿಸಿದ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿಯ ರಾ. ಹೆದ್ದಾರಿಯ 4 ರಲ್ಲಿನ ಸೇತುವೆ ಮೇಲೆ ಸಂಭವಿಸಿದೆ. ಘಟನೆಯಲ್ಲಿ ಮೂವರರು ಗಾಯಗೊಂಡಿದ್ದು, ಅವರನ್ನ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಎರಡು ಕಾರ್ ಗಳು ಆನಗೋಡು ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದವು. ಈ ವೇಳೆ ಮಳೆಯಾಗಿದ್ದರಿಂದ ರಸ್ತೆಯ ಮೇಲೆ ನೀರು ನಿಂತುಕೊಂಡಿದ್ದು, ನೀರಿನ ಮೇಲೆ ಕಾರು ಹಾದು ಹೋಗಿವೆ. ಈ ವೇಳೇ ನೀರು ಹಿಂದಿನ ಕಾರ್ ಗೆ ಚಿಮ್ಮಿದ ಪರಿಣಾಮ ಚಾಲಕನಿಗೆ ರಸ್ತೆ ಕಾಣದಂತಾಗಿದ್ದು, ಆತ ಮುಂದೆ ತೆರಳುತ್ತಿದ್ದ ಮಾರುತಿ ಕಾರ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಎರಡು ಕಾರ್ ನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನ ಜಿಪಂ ಸದಸ್ಯ ಬಸವಂತಪ್ಪ ಹಾಗೂ ಸ್ಥಳೀಯರು ರಕ್ಷಣೆ ಮಾಡಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಮತ್ತು ಕ್ರೀಟಾ ಕಾರ್ ನ ಮುಂಭಾಗದ ಜಖಂಗೊಂಡಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!