ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ದಾವಣಗೆರೆ: ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಗದಗದ ಶಂಕರ್ ಧರ್ಮಣ್ಣ ಕುದರಿಮೋತಿ ಆಯ್ಕೆಯಾಗಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕುಮಾರ್ ಹೊನಕೇರಿ(ಚಿಕ್ಕಮಗಳೂರು), ಗೌರವ ಅಧ್ಯಕ್ಷರಾಗಿ ಹಿರೇಮಠ್ ಸಿ.ಎಸ್. (ಹುಬ್ಬಳ್ಳಿ), ರಾಜ್ಯ ಉಪಾಧ್ಯಕ್ಷರಾಗಿ ಎ.ಎನ್ ಕೃಷ್ಣಮೂರ್ತಿ (ದಾವಣಗೆರೆ), ರಾಜ್ಯ ಸಹಕಾರ್ಯದರ್ಶಿಯಾಗಿ ಪರಶುರಾಮ್ ಕಾಳೇರ್ (ಹಾವೇರಿ) ಖಜಾಂಚಿಯಾಗಿ ಸತ್ಯನಾರಾಯಣ ಹೆಚ್.ವಿ (ಶಿವಮೊಗ್ಗ) ಹಾಗೂ ನಿರ್ದೇಶಕರುಗಳಾಗಿ ರಾಜು(ವಿಜಯನಗರ), ತಿಪ್ಪೆಸ್ವಾಮಿ ಎಸ್.(ಚಿತ್ರದುರ್ಗ), ಶ್ರೀನಿವಾಸ ದಿವಾಕರ್( ಬಳ್ಳಾರಿ), ಕೃಷ್ಣ(ಬೆಂಗಳೂರು), ಗಿರಿಧರ್ ದಿವಟೆ(ಹುಬ್ಬಳ್ಳಿ) ಇವರು ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪತ್ರಿಕಾ ವಿತರಕ ಪ್ರಮುಖರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನುಅವಿರೋಧವಾಗಿ ನೇಮಕಗೊಳಿಸಲಾಯಿತು.