ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ವಿಶೇಷ ಯೋಜನೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಬೆಂಗಳೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಮಲ್ಲೇಶ್ವರನ ಅರಣ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು. ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್ನಲ್ಲಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.
ಇದೇ ಮೊದಲ ಬಾರಿಗೆ ಪರಿಸರ ಸ್ಥಾಪಿಸಲು ಯೋಜನೆ ತರಲು ಉದ್ದೇಶಿಸಲಾಗಿದೆ ಈ ಮೂಲಕ ಪರಿಸರ ನಷ್ಟ ತಡೆಯಲು ಹೆಚ್ಚಿಸಲಾಗುವುದು ಎಂದರು.
ನಮ್ಮ ಹಿರಿಯರು ಅರಣ್ಯ ಸಂರಕ್ಷಣೆ ಮಾಡಿದ್ದರಿಂದ ಇಂದು ನಾವಿದ್ದೇವೆ ಹಿರಿಯರಂತೆ ನಾವು ಕೂಡ ಮುಂದಿನ ಪೀಳಿಗೆಯವರಿಗೆ ಪರಿಸರ ಅರಣ್ಯ ಸಂರಕ್ಷಣೆ ಮಾಡಬೇಕಿದೆ ಇತ್ತೀಚಿಗೆ ಪರಿಸರ ನಾಷ್ಟ ಹೆಚ್ಚಾಗುತ್ತಿದೆ ಮುಂದಿನ ಪೀಳಿಗೆಗಾಗಿ ಪರಿಸರ ನಷ್ಟ ತಪ್ಪಿಸಬೇಕಿದೆ ಅದಕ್ಕೆ ವಾರ್ಷಿಕ ಅಧ್ಯಯನ ಅಗತ್ಯ. ಬಜೆಟ್ನಲ್ಲಿ ಪರಿಸರದ ಕೊರತೆ ನೀಗಿಸಲು ಯೋಜನೆ ತರಬೇಕಿದೆ ಎಂದರು.
ಕಾಡು ಉಳಿಸಲು ಸರ್ಕಾರ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಅತ್ಯಂತ ದಕ್ಷತೆಯಿಂದ ಕಾಡು ಉಳಿಸುವ ಕಾರ್ಯ ಆಗಬೇಕು. ಕಾಡಿನ ಜೊತೆಗೆ ಪ್ರಾಣಿಗಳ ಬಲಿ ಕಡಿಮೆಯಾಗಬೇಕು. ನಾಡಿಗೆ ಬಂದಿರುವ ಕಾಡುಪ್ರಾಣಿಗಳನ್ನು ಮತ್ತೆ ಕಾಡಿಗೆ ಕಳಿಸಬೇಕು. ಇಂಚರ ಪ್ರಾಣ ಉಳಿಸುವುದು ಕೂಡ ಮುಖ್ಯ ಎಂದರು.
ಯಡಿಯೂರಪ್ಪರ ಅವಧಿಯಲ್ಲಿ ಅರಣ್ಯ ಹುತಾತ್ಮರಾದ ಅವರಿಗೆ ರೂ 30 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅದಕ್ಕಿಂತಲೂ ಮುಂಚೆ ಪರಿಹಾರ ಮೊತ್ತ ಕಡಿಮೆ ಇತ್ತು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಉತಾತ್ಮ ಅರಣ್ಯ ಸಿಬ್ಬಂದಿಯ ಸ್ಮಾರಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದರು.