ಕೋವಿಡ್ ವಾರಿಯರ್ ಮೋಹಿದ್ದೀನ್ ಗೆ ರಾಜ್ಯೋತ್ಸವ ಪ್ರಶಸ್ತಿ : ಬಾಡದ ಆನಂದರಾಜು ಅಭಿನಂದನೆ
ದಾವಣಗೆರೆ : ಕೊರೊನಾ ಸಂದರ್ಭದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ ನಗರದ ಜೆ. ಮೋಹಿದ್ದೀನ್ ಗೆ ಈ ಬಾರಿ ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಉತ್ತಮ ಕಾರ್ಯ ಎಂದು ಶೋಷಿತ ವರ್ಗ ಗಳ ಒಕ್ಕೂಟದ ಮುಖಂಡರಾದ ಬಾಡದ ಆನಂದರಾಜು ಅಭಿಪ್ರಾಯಪಟ್ಟಿದ್ದಾರೆ. ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ಉತ್ತಮವಾದ ವ್ಯಕ್ತಿಗಳನ್ನ ಆಯ್ಕೆ ಮಾಡಿದ್ದಾರೆ ಈ ಪ್ರಶಸ್ತಿ ಗೌರವ ಸೂಕ್ತ ವ್ಯಕ್ತಿಗಳಿಗೆ ಸಿಕ್ಕಿದೆ ಇದರಲ್ಲಿ ಸಮಾಜಿಕ ಕಾರ್ಯಕರ್ತ ಮೋಹಿದ್ದೀನ್ ಗೆ ಸಿಕ್ಕಿರುವುದು ಸಂತಸದ ವಿಚಾರ ಎಂದು ಬಾಡದ ಆನಂದರಾಜು ಅಭಿಪ್ರಾಯಪಟ್ಟಿದ್ದಾರೆ.
ಮೋಹಿದ್ದೀನ್ ಕೇವಲ ಕೊರೊನಾ ವಾರಿಯರ್ಸ್ ಮಾತ್ರವಲ್ಲ ಕನ್ನಡ ಹೋರಾಟಗಾರ ಕೂಡ ಕನ್ನಡ ನಾಡು ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಹೋರಾಟ ಮಾಡುವ ಮೂಲಕ ನಾಡು ನುಡಿ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದಿದ್ದಾರೆ. ಮೋಹಿದ್ದೀನ್ ಇನ್ನೂ ಹೆಚ್ಚಿನ ಕೆಲಸ ಮಾಡಲು ಹೆಚ್ಚು ಜವಾಬ್ದಾರಿ ನೀಡಿದಂತಾಗಿದೆ ಸಮಾಜ ಸೇವೆ ಮಾಡುವ ಮೂಲಕ ಎಲ್ಲಾ ಯುವಕರಿಗೂ ಮಾದರಿಯಾಗಲಿ ಎಂದರು.
ಇನ್ನೂ ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯನ್ನ ಮೇಯರ್ ಎಸ್.ಟಿ ವೀರೇಶ್ ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ ಕನ್ನಡ ಪ್ರೇಮಿ ಹೋರಾಟಗಾರರಾದ ವೀರೇಶ್ ಅವರು ಮಹಾನಗರ ಪಾಲಿಕೆ ಮೇಯರ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಾಡದ ಆನಂದರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.