ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸುಲ್ತಾನ್ ಬೀ ಯವರಿಗೆ ಸನ್ಮಾನ
ಜಗಳೂರು: ದಾವಣಗೆರೆ – ಚಿತ್ರದುಗ೯ ಜಿಲ್ಲಾ ಬ್ಯಾಂಕ ನಿವೃತ್ತ ನೌಕರರ ಒಕ್ಕೂಟದ ವತಿಯಿ೦ದ ಇಂದು ಜಗಳೂರಿನಲ್ಲಿ 2021 ನೇ ಸಾಲಿನ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸೂಲಗಿತ್ತಿ ಸುಲ್ತಾನ್ ಬೀ ಯವರನ್ನು ಸನ್ಮಾನಿಸಲಾಯಿತು. ದಾವಣಗೆರೆಯಿಂದ ಇದೇ ಉದ್ದೇಶಕ್ಕಾಗಿ ಆಗಮಿಸಿದ ಒಕ್ಕೂಟದ ಪ್ರದಾನ ಕಾರ್ಯದಶಿ೯ ಶ್ರೀ ಜಿ. ರಂಗ ಸ್ವಾಮಿಯವರು, ಶ್ರೀ ಶಾಂತಾ ಗಂಗಾಧರ್ ,ಪದಾದಿಕಾರಿಗಳಾದ ಶ್ರೀ ರವಿ, ಹನುಮಂತಪ್ಪ ಮುಂತಾದವರು ಗೊಲ್ಲರಹಟ್ಟಿಯಲ್ಲಿ ಇರುವ ವಿಜೇತರ ಮನೆಗೆ ತೆರಳಿ ಆತ್ಮೀಯವಾಗಿ ಸನ್ಮಾನಿಸಿ,ಉಭಯ ಕುಶಲೋಪರಿ ವಿಚಾರಿಸಿದರು.
ಈಸಂದರ್ಭದಲ್ಲಿ ಮಾತನಾಡಿದ ಶಾಂತಾ ಗಂಗಾಧರ ಹಾಗೂ ರಂಗಸ್ವಾಮಿ ಅವರು ಪ್ರತಿ ವರ್ಷದಂತೆ ತಮ್ಮ ಒಕ್ಕೂಟ ಇಂತಹ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು. ಸುಲ್ತಾನ್ ಬೀ ಯವರ ಆರೋಗ್ಯ ಲಾಲನೆ ಪಾಲನೆಗಾಗಿ ಸೂಕ್ತ ಮಾರ್ಗದರ್ಶನವನ್ನು ಊರಿನ ಹಾಗೂ ಜಗಳೂರಿನ ಸಾಹಿತ್ಯಾಸಕ್ತ ಬಳಗದವರು ಮಾಡು ವಂತಾಗಲಿ ಎಂದು ಆಶಿಸಿದರು.
ಈ ಸಮಯದಲ್ಲಿ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷ ರಾಗಿದ್ದ ಶ್ರಿ ಎನ್ ಟಿ ಎರ್ರಿ ಸ್ವಾಮಿ, ಜಗಳೂರು ತಾಲೂಕ
ಕ ಸಾ ಪ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಹಜರತ್ ಅಲಿ, ಲಿಯೋ ಕ್ಲಬ್ ಅಧ್ಯಕ್ಷರಾದ ಶ್ರೀ ಸೈಯದ್ ವಾಸಿಂ, ಸುಲ್ತಾನ್ ಬೀಯವರ ಬಂದುಗಳು ಬಿಸಿ ಉಪಸ್ಥಿತರಿದ್ದು ಶುಭ ಹಾರೈಸಿದರು.