ರಂಗೋಲಿಯಲ್ಲಿ ಮೂಡಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ನ ಕಲಾಕೃತಿ

ಬೆಂಗಳೂರು: ಒಲಂಪಿಕ್ ನ ಅಥ್ಲೆಟಿಕ್ ವಿಭಾಗದಲ್ಲಿ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ಅವರ ಭಾವಚಿತ್ರದ ರಂಗೋಲಿ ಕಲಾಕೃತಿಯನ್ನು ಬೆಂಗಳೂರಿನ ವೆಗಾ ಸಿಟಿ ಮಾಲ್ ನಲ್ಲಿ ಪ್ರದರ್ಶಿಸಲಾಯಿತು.
ಯುವ ಜನಾಂಗಕ್ಕೆ ರೋಲ್ ಮಾಡಲ್ ಆಗಿರುವ ನೀರಜ್ ಚೋಪ್ರ ಅವರು ಎಲ್ಲರಿಗೂ ಸ್ಪೂರ್ತಿಯಾಗಲಿ ಎಂಬ ಉದ್ದೇಶದಿಂದ ವೆಗಾ ಮಾಲ್ ನಲ್ಲಿ ಅವರ ಭಾವಚಿತ್ರವನ್ನು ಬಾದಾಮಿ ಜಿಲ್ಲೆಯ ಕಲಾವಿದ ಅಕ್ಷಯ್ ಜಾಲಹಳ್ಳಿ ಇವರು ರಂಗೋಲಿಯಲ್ಲಿಯೇ ಅದ್ಭುತವಾಗಿ ರಚಿಸಿ ಪ್ರದರ್ಶಿಸಿದರು.
ಪೇಂಟಿಂಗ್, ಮರಳಿನಲ್ಲಿ ಕಲಾಕೃತಿಗಳನ್ನು ರಚಿಸುವ ಕಲಾವಿದರಿದ್ದು, ವಿನೂತನ ಪ್ರತಿಭೆ ಹೊಂದಿರುವ ಅಕ್ಷಯ್ ಜಾಲಹಳ್ಳಿ ರಂಗೋಲಿಯಲ್ಲಿ ಅದ್ಭುತವಾಗಿ
ನೀರಜ್ ಚೋಪ್ರಾರ ಭಾವಚಿತ್ರವನ್ನು ಮೂಡಿಸಿದ್ದರು. ಇದು ನೋಡುಗರ ಕಣ್ಮನ ಸೆಳೆಯಿತು.