ಬಾಲಕಿ ಮೇಲೆ ಅತ್ಯಾಚಾರ: 22ರ ಹುಡುಗನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಉತ್ತರ ಪ್ರದೇಶ : 16 ವರ್ಷದ ಬಾಲಕಿಯನ್ನು ಅಪರಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ 22 ವರ್ಷದ ಹುಡುಗನೊಬ್ಬನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ವಿಧಿಸಿದೆ.
ಇದು 2022 ಮಾ.9ರಿಂದ ಶುರುವಾದ ಕಾನೂನು ಹೋರಾಟವಾಗಿದ್ದು ಕೊನೆಗೂ ಆರೋಪಿ ಅಜಯ್ ಕುಮಾರ್ ಯಾದವ್‌ಗೆ ಶಿಕ್ಷೆ ಘೋಷಣೆಯಾಗಿದೆ.
ಫೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಹಕ್ಕು) ಕಾನೂನಿನಡಿ ದಾಖಲಾದ ಈ ಪ್ರಕರಣದ ಕುರಿತು ನ್ಯಾಯಮೂರ್ತಿ ಮಧು ಡೋಗ್ರಾ ಅವರು ಅಪರಾಧಿಗೆ ಸೆರೆಮನೆ ವಾಸದ ಜತೆಗೆ 33 ಸಾವಿರ ದಂಡ ವಿಧಿಸಿದ್ದು, ಅದರಲ್ಲಿ ಬಾಲಕಿಗೆ 25 ಸಾವಿರ ಕೊಡಬೇಕಾಗುತ್ತದೆ ಎಂದು ಭಾನುವಾರ ಆದೇಶಿಸಿದರು.
ಅಪರಾಧಿಯು ಎಪ್ರಿಲ್ 29ರಂದು ಎಂಟನೇ ತರಗತಿ ಓದುತ್ತಿದ್ದ 16 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದನು. ಈ ಕುರಿತು ಬಾಲಕಿಯ ತಂದೆಯು ಅಜಯ್ ವಿರುದ್ಧ ದೂರು ದಾಖಲಿಸಿದ್ದರು.