ರಾಷ್ಟ್ರಕವಿ ಕುವೆಂಪು ಸಾಹಿತ್ಯ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳಬೇಕು – ಶಿವಾನಂದ ಕಾಪಶಿ

Rashtrakavi Kuvempu literary works should be read and meditated upon - Shivananda Kapashi

ದಾವಣಗೆರೆ: ವಿಶ್ವಮಾನವ ದಿನಾಚರಣೆ ಅತ್ಯಂತ ವಿಶೇಷವಾದದ್ದು, ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳುವ ಮೂಲಕ ನಾವು ವಿಶ್ವ ಮಾನವರಾಗಬೇಕು  ಎಂದು ಜಿಲ್ಲಾಧಿಕಾರಿ ಡಾ.ಶಿವಾನಂದ ಕಾಪಶಿ ಕರೆ ನೀಡಿದರು
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಮತ-ಪಥಗಳ ಹೆಸರನ್ನು ಬಿಟ್ಟು ವಿಶ್ವಪಥಕ್ಕೆ ಬನ್ನಿ ಎಂಬ ಕುವೆಂಪುರವರ ವಿಶ್ವ ಮಾನವ ಸಂದೇಶವನ್ನು ಸ್ಮರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ, ಕುವೆಂಪು ಅವರ ಸಂದೇಶಗಳು ಎಲ್ಲ ಕಾಲಗಳಲ್ಲಿಯೂ ಪ್ರಸ್ತುತವಾಗಿವಾಗಿವೆ ಎಂದ ಅವರು, ಕುವೆಂಪು 1956 ರಲ್ಲಿ ತಮ್ಮ ಮಗ ತೇಜಸ್ವಿಯವರಿಗೆ ಬರೆದ ಪತ್ರವನ್ನು ಓದಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ನಾಮದೇವಪ್ಪ,  ನಗರವಾಣಿ ದಿನಪತ್ರಿಕೆ ಸಂಪಾದಕ ಬಿ.ಎನ್ ಮಲ್ಲೇಶ್, ದಲಿತ ಮುಖಂಡÀ ತಿಮ್ಮಣ್ಣ, ವಿಶ್ವಮಾನವ ಮಂಟಪದ ಅಧ್ಯಕ್ಷ ಅವರಗೆರೆ ರುದ್ರಮುನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!