ಮಾರ್ಚ್ 8 ರಂದು ಕೊಡದಗುಡ್ಡ ವೀರಭದ್ರಸ್ವಾಮಿ ಯ ರಥೋತ್ಸವ
ದಾವಣಗೆರೆ : ಜಗಳೂರು ತಾಲೂಕು ಕೊಡದಗುಡ್ಡದ ವೀರಭದ್ರಸ್ವಾಮಿ ಯ ರಥೋತ್ಸವವು ಮಾರ್ಚ್ 8 ರಂದು ಬುಧವಾರ ಸಾಯಂಕಾಲ 4.30. ಕೆ ವಿಜೃಂಭಣೆಯಿಂದ ಜರಗಲಿದೆ.
ಮಾರ್ಚ್ 4 ರಿಂದ 10 ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ.ಇದರ ಅಂಗವಾಗಿ ಮಾರ್ಚ್.9 ಹಾಗೂ 10 ರಂದು ಎರಡು ದಿನ ಜಾತ್ರೆ ನಡೆಯಲಿದೆ ಈ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲಾ ಜಿಲ್ಲೆಯಿಂದ ಭಕ್ತರು ಆಗಮಿಸುವುದರಿಂದ ಉತ್ತಮವಾದ ಸಾರಿಗೆ ವ್ಯವಸ್ಥೆ ಹಾಗೂ ಬಂದ ಭಕ್ತರು ಉಳಿದು ಕೊಳ್ಳುವುದಕ್ಕೆ ವಿಶಾಲವಾದ ಹೊರಾಂಗಣ ಹಾಗೂ ಅತಿಥಿ ಗೃಹ ಜೊತೆಗೆ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಎಂದು ಕಾರ್ಯದರ್ಶಿ. ಡಿ .ಸಿ. ರುದ್ರಮುನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 98808 77 058 ಹಾಗೂ 944 8178263 ಮತ್ತು 9945450 443 ಸಂಪರ್ಕಿಸಬಹುದಾಗಿದೆ.