ನವದೆಹಲಿ : ಆರ್ ಬಿಐನ ರೆಪೊ ದರವನ್ನು ಮತ್ತೆ ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಬುಧವಾರ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು ರೆಪೊ ದರವನ್ನು 25 ಮೂಲಾಂಕ ಏರಿಕೆ ಮಾಡಿದ್ದು, ರೆಪೊ ದರವು ಶೇಕಡಾ 6.5ಕ್ಕೆ ತಲುಪಿದೆ.
ರಿಸರ್ವ್ ಬ್ಯಾಂಕ್ 2023-24ಕ್ಕೆ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.4 ಎಂದು ನಿರೀಕ್ಷಿಸಿದೆ. 2023-24 ರ ನೈಜ GDP ಬೆಳವಣಿಗೆಯು 6.4% ರಷ್ಟಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8, ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 6.2, ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.8ರಷ್ಟು ನಿರೀಕ್ಷಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ, ಉಕ್ರೇನ್-ರಷ್ಯಾ ಯುದ್ಧ ಮೊದಲಾದವುಗಳಿಂದ ತೀವ್ರ ಆರ್ಥಿಕ ಹಿನ್ನಡೆಯಿಂದ ತೀವ್ರ ಹಣದುಬ್ಬರ, ಆರ್ಥಿಕ ದುಸ್ಥಿರತೆ ಉಂಟಾಗಿದೆ. ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳು ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವ ಮತ್ತು ನೀತಿ ವಿಶ್ವಾಸಾರ್ಹತೆಯನ್ನು ಕಾಪಾಡುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ನಡುವೆ ತೀಕ್ಷ್ಣವಾದ ವಿನಿಮಯವನ್ನು ಎದುರಿಸುತ್ತಿವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
