ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ, ನಿರ್ವಹಣೆಗೆ ಸಿಬ್ಬಂದಿಗಳ ನೇಮಕ

ದಾವಣಗೆರೆ :  ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ನೀರು ಸರಬರಾಜು ವಿಭಾಗಕ್ಕೆ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

ವಿದ್ಯುತ್ ಮತ್ತು ನೀರು ಸರಬರಾಜಿನ ನೋಡಲ್ ಅಧಿಕಾರಿಯಾಗಿ ಎಂ.ಹೆಚ್ ಉದಯ್‌ಕುಮಾರ್ ಮೊ.ಸಂ: 9900899559 ಇವರು ಕಾರ್ಯನಿರ್ವಹಿಸುವರು. ಉಳಿದಂತೆ ವಲಯ ಕಚೇರಿ-01 ನೀರು ಸರಬರಾಜು ಮತ್ತು ಬೋರ್‌ವೆಲ್‌ಗಳ ರಿಪೇರಿ ಹಾಗೂ ದುರಸ್ತಿ ಕಾರ್ಯನಿರ್ವಹಣೆ ಮೇಲ್ವಿಚಾರಣೆಯನ್ನು ವಾರ್ಡ್ ನಂ: 1 ರಿಂದ 14 ಮತ್ತು 45 ವ್ಯಾಪ್ತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಚಿನ್.ಸಿ.ಎಂ. ಮೊ.ಸಂ:7829137361, ವಾರ್ಡ್ 1 ರಿಂದ 5 ರವರೆಗೆ ಕಿರಿಯ ಅಭಿಯಂತರರಾದ ಈ.ಪ್ರಕಾಶ್ ಮೊ.ಸಂ:9742037934, ವಾರ್ಡ್ ನಂ:6 ರಿಂದ 10 ರವರೆಗೆ ಸಹಾಯಕ ಅಭಿಯಂತರರಾದ ಯುಸಫ್ ಅಲಿಖಾನ್.ಎನ್ ಮೊ.ಸಂ:9164091278, ವಾರ್ಡ್ ನಂ:11 ರಿಂದ 14 ಮತ್ತು 45 ರವರೆಗೆ ಸಹಾಯಕ ಅಭಿಯಂತರರಾದ ಪ್ರವೀಣಕುಮಾರ್.ಹೆಚ್.ಬಿ ಮೊ.ಸಂ:7760117430,

ವಲಯ ಕಚೇರಿ-02 ವಾರ್ಡ್ ನಂ: 18,19,20,21,25,26,27,28,29,30,32,33,34,35,36,37 ರ ವ್ಯಾಪ್ತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿನಾಯಕ ನಂಜಪ್ಪ ನಾಯಕ ಮೊ.ಸಂ:8431563165, ವಾರ್ಡ್ ನಂ:18,19,20,21,25,26,27 ಮತ್ತು 28 ರವರಗೆ ಸಹಾಯಕ ಅಭಿಯಂತರರಾದ ಮಧುಸೂಧನ್.ಪಿ. ಮೊ.ಸಂ:9611103412, ವಾರ್ಡ್ ನಂ:29,30,32,33,34,35,36 ಮತ್ತು 37 ರವರೆಗೆ ಕಿರಿಯ ಅಭಿಯಂತರರಾದ ಶೋಯಬ್ ಖಾನ್ ಮೊ.ಸಂ:9738729141.
ವಲಯ ಕಚೇರಿ-03 ವಾರ್ಡ್ ನಂ:15,16,17,22,23,24,38,39,31,40,41.42,43 ಮತ್ತು 44 ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅನುಪ್ ಕನೋಜ್ ಮೊ.ಸಂ:9880913909, ವಾರ್ಡ್ ನಂ: 15,16,17,22,23,24,38 ಮತ್ತು 39 ರವರೆಗೆ ಕಿರಿಯ ಅಭಿಯಂತರರಾದ ಮಾರುತಿ.ಎಸ್ ಹಾದಿಮನಿ ಮೊ.ಸಂ:9538770058, ವಾರ್ಡ್ ನಂ:31,40.41,42.43 ಮತ್ತು 44 ರವರೆಗೆ ಕಿರಿಯ ಅಭಿಯಂತರರಾದ ಶ್ವೇತಾ.ಈ ಮೊ.ಸಂ:9036887318 ಇವರನ್ನು ಸಂಪರ್ಕಿಸಲು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!