ರಾಜ್ಯದ ವಿವಿಧ ತಾಲೂಕು ಪಂಚಾಯ್ತಿಗಳಿಗೆ ಅನುದಾನ ಬಿಡುಗಡೆ! ಜಗಳೂರು ತಾಲೂಕಿಗೆ ಎಷ್ಟು ಅನುದಾನ ಗೊತ್ತಾ?
ದಾವಣಗೆರೆ: ರಾಜ್ಯದ ವಿವಿಧ ತಾಲೂಕು ಪಂಚಾಯ್ತಿಗಳ ಮತ್ತು ಅವುಗಳ ವ್ಯಾಪ್ತಿಯ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಅಧಿಕಾರಿ, ಸಿಬ್ಬಂದಿಯವರ ವೇತನ, ದಿನಗೂಲಿ ನೌಕರರ ವೇತನ, ಹೊರಗುತ್ತಿಗೆ ಸಿಬ್ಬಂದಿಯವರ ಸಂಭಾವನೆಗಾಗಿ ಹಾಗೂ ಅತಿಥಿ ಶಿಕ್ಷಕರ ಗೌರವಧನ ಪಾವತಿಗಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿ ಜೂನ್ 9ರ, 2022ರಂದು ಆದೇಶ ಹೊರಡಿಸಿದೆ.
ರಾಜ್ಯದ ಒಟ್ಟು 15 ತಾಲೂಕು ಪಂಚಾಯ್ತಿಗಳಿಗೆ ಎರಡು ಲೆಕ್ಕ ಶೀರ್ಷಿಕೆಯಡಿ ಒಟ್ಟು 540.89 ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿದೆ. ಕಾಲಂ 4ರ ಲೆಕ್ಕಶೀರ್ಷಿಕೆಯಡಿ ರೂ.536.39 ಲಕ್ಷ ಹಾಗೂ ಕಾಲಂ 5ರ ಲೆಕ್ಕ ಶೀರ್ಷಿಕೆಯಡಿ ರೂ. 4.50 ಲಕ್ಷಗಳು ಸೇರಿ ಒಟ್ಟು 540.89 ಲಕ್ಷ ರೂಗಳನ್ನು ಬಿಡುಗಡೆಗೊಳಿಸಿದೆ.
ಕರ್ನಾಟಕ ರಾಜ್ಯದ ಬಂಟ್ವಾಳ, ತಿಪಟೂರು, ಹಾಸನ, ಗುಬ್ಬಿ, ಮುಧೋಳ, ಜಗಳೂರು, ಕಂಪ್ಲಿ, ಮೈಸೂರು, ಕೊಪ್ಪ, ಕಡಬ, ತರೀಕೆರೆ, ಬೆಂಗಳೂರು ಪೂರ್ವ, ಕಂಪ್ಲಿ, ಕಾಳಗಿ, ಕಮಲಾಪುರ, ಹೊಸಕೋಟೆ ತಾಲೂಕು ಪಂಚಾಯ್ತಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಕಂಪ್ಲಿ ತಾಲೂಕಿಗೆ ಎರಡು ಕಾರ್ಯಕ್ರಮದ ಲೆಕ್ಕ ಶೀರ್ಷಿಕೆಯಡಿ ಅನುದಾನ ಬಿಡುಗಡೆಯಾಗಿದೆ.
garudavoice21@gmail.com 9740365719