ಪ್ರಯಾಣಿಕನ ಗಲಾಟೆಗೆ ಹಿಂದಿರುಗಿದ ವಿಮಾನ

ನವದೆಹಲಿ: ಪ್ರಯಾಣಿಕರೊಬ್ಬರು ಗದ್ದಲ ಸೃಷ್ಟಿಸಿದ ಪರಿಣಾಮ, ಲಂಡನ್‌ನತ್ತ ಹಾರಾಟ ನಡೆಸಿದ್ದ ಏರ್ ಇಂಡಿಯಾ ವಿಮಾನವು ಸೋಮವಾರ ದೆಹಲಿಗೆ ವಾಪಸ್ ಆಗಿದೆ.
225 ಪ್ರಯಾಣಿಕರಿದ್ದ ‘AI 111’ ವಿಮಾನವು, ಪ್ರಯಾಣಿಕ ಗಲಾಟೆ ಮಾಡಿದ ಬಳಿಕ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಐಜಿಐಎ) ವಿಮಾನಕ್ಕೆ ಹಿಂದಿರುಗಿತು ಎನ್ನಲಾಗಿದೆ.
ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನನ್ನು ನಿಲ್ದಾಣದಲ್ಲಿ ಕೆಳಗಿಳಿಸಿದ ಬಳಿಕ, ವಿಮಾನವು ಲಂಡನ್‌ನ ಹೀಥ್ರೋ ಕಡೆಗೆ ಹಾರಾಟ ನಡೆಸಿದೆ. ಈ ಬಗ್ಗೆ ಏರ್ ಇಂಡಿಯಾ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.