ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ ಚುನಾವಣಾಧಿಕಾರಿ ಒಪ್ಪಿಗೆ – ಸೂರ್ಯಪ್ರಕಾಶ್

ದಾವಣಗೆರೆ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಅಂ ಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಜಯಂತಿ ಆಚರಿಸಲು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಸೂರ್ಯಪ್ರಕಾಶ್ ಆರ್. ಅನುಮತಿ ಕೋರಿದ್ದರು.
ದಿನಾಂಕ 14.4.23ರ ಶುಕ್ರವಾರ ಬೆಳಿಗ್ಗೆ 8 ರಿಂದ 11.30ರವರೆಗೆ ಪಥಸಂಚಲನ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ವಿವಿಧ ಸಮುದಾಯಗಳಿಗೆ ಹೋರಾಡಿದ ದಡೃಶ್ಯಾವಳಿಗಳ ಭಾವಚಿತ್ರಗಳಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ನೇಮ್ ಬೋರ್ಡ್ ಹಾಕಲು ಸೂರ್ಯ ಪ್ರಕಾಶ್ ಅನುಮತಿ ಕೋರಿದ್ದರು.
ಅವರ ಪತ್ರಕ್ಕೆ ಉತ್ತರಿಸುವ ಚುನಾವಣಾಧಿಕಾರಿಗಳು ಷರತ್ತುಗಳ ಮೇರೆಗೆ ಒಪ್ಪಿಗೆ ನೀಡಿದ್ದಾರ. ವಿಧಾನಸಭಾ ಚುನಾವಣೆಗೆ ಯಾವುದೇ ರೀತಿ ಪ್ರಭಾವ ಬೀರುವ ಕಾರ್ಯಚಟುವಟಿಕೆ ಮಾಡುವಂತಿಲ್ಲ ಎಂಬ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಸಂಬಂಧಪಟ್ಟವರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು.
ಕಾರ್ಯಕ್ರಮದಲ್ಲಿ ಹಾಜರಾಗುವ ಜನರ ಸಂಖ್ಯೆಯನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿ, ಅವರ ನಿರ್ದೇಶನ ಪಾಲಿಸಬೇಕು. ಕಾರ್ಯಕ್ರಮಕ್ಕೆ ಉಪಯೋಗಿಸುವ ವಾಹನಗಳ ಬಗ್ಗೆ, ಅನುಮತಿ ಪಡೆದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪೊಲೀಸ್ ಇಲಾಖೆ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.