ಡಿ.19 ರಂದು ದಾವಣಗೆರೆಯಲ್ಲಿ ‘ಋಷಿಮೂಲ ಹುಡುಕೋಣ ಬನ್ನಿ’ ಕಾರ್ಯಕ್ರಮ
ದಾವಣಗೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ವತಿಯಿಂದ ಸನಾತನ ಜ್ಞಾನ ಪರಂಪರೆಯ ಪುನರುತ್ಥಾನಕ್ಕಾಗಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಡಿ.೧೯ ರಂದು ‘ಋಷಿಮೂಲ ಹುಡುಕೋಣ ಬನ್ನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಯೋಜಕ ಅಜಯ್ ಭಾರತೀಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೫ ಗಂಟೆಗೆ ಋಷಿ ಪರಂಪರೆಯ ಜ್ಞಾನ ದೀವಿಗೆ ಮತ್ತು ವಿಸ್ಮೃತಿ ಹಾಗೂ ಪ್ರಾಚೀನ ಶಿಕ್ಷಣ ಪದ್ಧತಿಯು ಪ್ರಭಾವಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿಷಯ ಕುರಿತು ಪತ್ರಕರ್ತ, ಸಾಹಿತಿ ರೋಹಿತ್ ಚಕ್ರತೀರ್ಥ ಉಪನ್ಯಾಸ ನೀಡಲಿದ್ದಾರೆ. ನಂತರ ನಡೆಯುವ ಸಮಾರೋಪ ಕ್ರಾರ್ಯಕ್ರಮದಲ್ಲಿ ರಘುನಂದನ್ ಭಟ್ ನರೂರ ಸಮಾರೋಪ ನುಡಿಗಳನ್ನಾಡುವರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕೋಲ್ಕುಂಟೆ ಇದ್ದರು.