ರಿಷ್ಯಂತ್ ಸರ್ ಪೊಲೀಸ್ ವೆಲ್ ಫೇರ್ ಬಗ್ಗೆ ಗಮನಹರಿಸಿದ್ದರು – ನಿವೃತ್ತ ಎಸ್ ಪಿ ಜಿ.ಎ.ಜಗದೀಶ್

ದಾವಣಗೆರೆ: ಸಿ.ಬಿ.ರಿಷ್ಯಂತ್ ಅವರು ಸುಮಾರು 2 ವರ್ಷಗಳ ಕಾಲ ದಾವಣಗೆರೆ ಜಿಲ್ಲೆಯಲ್ಲಿ ಎಸ್ ಪಿ ಆಗಿ ವೃತ್ತಿಪರ ಸೇವೆ ಸಲ್ಲಿಸಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪೊಲೀಸ್ ಮತ್ತು ಸಾರ್ವಜನಿಕ ಸಂಬಂಧಗಳಿಗೆ ಒತ್ತು ನೀಡಿ ಜನಪರ ಕೆಲಸ ಮಾಡಿ ಜನಸ್ನೇಹಿಯಾಗಿ ಜನಾನುರಾಗಿಯಾಗಿದ್ದಾರೆ.
ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೆಲ್ಫೇರ್ ಬಗ್ಗೆ ಗಮನಹರಿಸಿದ್ದಾರೆ. ನಮ್ಮ ದಾವಣಗೆರೆ ಜಿಲ್ಲೆಯ ನಾಗರಿಕರ ಶುಭ ಹಾರೈಕೆ ಇದೆ. ಪ್ರಸ್ತುತ ಮಂಗಳೂರಿನ ಎಸ್ ಪಿ ಆಗಿ ತೆರಳುತ್ತಿದ್ದಾರೆ. ಅವರಿಗೆ ಮುಂದಿನ ಸೇವಾವಧಿಯಲ್ಲಿಯೂ ಸಹ ಸಂಪೂರ್ಣ ಯಶಸ್ಸು ದೊರೆಯಲಿ.