ಸರ್ಕಾರಿ ಬಾಲಕಿಯರ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿನಿಯರಿಂದ ರಸ್ತೆ ನಿರ್ಮಾಣ

ಚಿತ್ರದುರ್ಗ: ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿನಿಯರೆಲ್ಲ ಒಟ್ಟಾಗಿ ಸೇರಿ, ಕಾಲೇಜಿನ ಒಳಭಾಗದಲ್ಲಿರುವ ಗುಂಡಿ ಬಿದ್ದ ರಸ್ತೆಗೆ ಕಲ್ಲುಗಳನ್ನು ಹಾಕಿ, ರಸ್ತೆ ನಿರ್ಮಾಣ ಮಾಡಿದರು .

ಮಳೆ ಬಂದಾಗ ಹರಿದು ಬರುವ ಚರಂಡಿ ನೀರು ರಸ್ತೆಯನ್ನು ಕೊರೆದುಕೊಂಡು, ಗುಂಡಿ ನಿರ್ಮಾಣ ಮಾಡಿತ್ತು. ಅದಕ್ಕೆ ಕಲ್ಲುಗಳನ್ನು ಹಾಕಿ ಸಮತಟ್ಟಾದ ರಸ್ತೆ ನಿರ್ಮಾಣ ಮಾಡಿ, ನೂರಾರು ಜನ ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಓಡಾಡುವಂತಹ ವ್ಯವಸ್ಥೆ ಕಲ್ಪಿಸಿದರು .

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ  ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದ ಎನ್ಎಸ್ಎಸ್ ವಿದ್ಯಾರ್ಥಿನಿಯರು ಬೆಳಿಗ್ಗೆಯಿಂದ ಶ್ರಮವಹಿಸಿ ಕಲ್ಲುಗಳನ್ನು ಹೊತ್ತು ತಂದು, ರಸ್ತೆ ನಿರ್ಮಾಣ ಮಾಡಿದರು.

ಒಗ್ಗಟ್ಟಿನಲ್ಲಿ ಬಲವಿದೆ, ಶ್ರಮದಾನದ ಮುಖಾಂತರವೂ ಸಹ ನಾವು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಬಹುದು  ಎಂಬುದನ್ನ ಇನ್ನಿತರ ವಿದ್ಯಾರ್ಥಿಗಳಿಗೆ  ಮಾದರಿಯಾದರು .


ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಶ್ರೀ  ದೇವೇಂದ್ರನಾಥ್ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿ ,

ವಿದ್ಯಾರ್ಥಿಗಳಾದ ಅನುಷಾ, ಸಂಜನಾ, ಸಹನಾ, ಆಯಿಷಾ, ತೇಜಸ್ವಿನಿ, ಭಾವನ, ಪುಷ್ಪ, ಎಚ್ಎಸ್ ರಚನ, ಎಚ್ ಎಸ್ ಪ್ರೇರಣ  ಭಾಗವಹಿಸಿದ್ದರು .

Leave a Reply

Your email address will not be published. Required fields are marked *

error: Content is protected !!