ಲೋಕಲ್ ಸುದ್ದಿ

ಭರ್ಜರಿ ರೋಡ್ ಶೋ: ಮಾಯಕೊಂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸವಿತಾ ಬಾಯಿ

ಭರ್ಜರಿ ರೋಡ್ ಶೋ: ಮಾಯಕೊಂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸವಿತಾ ಬಾಯಿ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರು, ನಗರದ ಜಯದೇವ ವೃತ್ತದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ನಗರದ ಪಿಬಿ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನ ಪ್ರಭಲ ಆಕಾಂಕ್ಷಿಯಾಗಿದ್ದ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರು, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ರೋಡ್ ಶೋ ವೀಕ್ಷಿಸಿ

ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಕೂಡ ಸೇರ್ಪಡೆಯಾಗಿದ್ದ ಇವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಗೆದ್ದರೆ ಕಾಂಗ್ರೆಸ್‌ಗೆ ಸೇರುತ್ತಾರೋ ಜೆಡಿಎಸ್‌ಗೆ ಸೇರುತ್ತಾರೋ ನೋಡಬೇಕಿದೆ.

ಮೊನ್ನೆ ತಮ್ಮ ಫೋಟೋಗಳನ್ನುಗಳನ್ನು ಬಳಸಿಕೊಂಡು ಅಶ್ಲೀಲವಾಗಿ ಅಪಪ್ರಚಾರ ಮಾಡಲಾಗಿದೆ ಎಂದು ಕೂಡ ಸವಿತಾಬಾಯಿ ಅವರು ಕಣ್ಣೀರಿಟ್ಟಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!