ಉಡುಪಿ: ಮಣಿಪಾಲ ಮತ್ತು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ನಕಲಿ ಸಿಗರೇಟ್ ಹಾಗೂ ನಿಷೇಧಿತ ಇ-ಸಿಗರೇಟ್ ಜಾಲವನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ2 ಪ್ರಕರಣ ಮತ್ತು ಪಡುಬಿದ್ರೆ ಠಾಣೆಯಲ್ಲಿ1 ಪ್ರಕರಣ ದಾಖಲಾಗಿದೆ. ಒಟ್ಟು ಮೂರು ಪ್ರಕರಣಗಳಲ್ಲಿಒಟ್ಟು 6,34,970 ರೂ. ಮೌಲ್ಯದ ನಕಲಿ ಐಟಿಸಿ ಕಂಪನಿಯ ಗೋಲ್ಡ್ ಫ್ಲೇಕ್ ನಕಲಿ ಸಿಗರೇಟ್‌ಗಳು, ವಿದೇಶಿ ಕಂಪನಿಯ ಸಿಗರೇಟ್ ಹಾಗೂ 113 ನಿಷೇಧಿತ ಇ- ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.17ರಂದು ಬೆಳಗ್ಗೆ 9.30 ರ ಸುಮಾರಿಗೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಯಾವುದೇ ದಾಖಲೆ ಇಲ್ಲದ ಸಾಗಾಟ ಮಾಡುತ್ತಿದ್ದ ಒಟ್ಟು 4,79,970 ರೂ. ಮೌಲ್ಯದ ಸಿಗರೇಟ್ ಬಂಡಲ್‌ಗಳು ಮತ್ತು ನಿಷೇಧಿತ ಇ-ಸಿಗರೇಟ್‌ಗಳನ್ನು ಸ್ವಾಧೀನ ಪಡಿಸಿಕೊಂಡ ಪೊಲೀಸರು ಇಬ್ಬರು ಬಂಧಿಸಿದ್ದರು. ಸಾಗಾಟಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಏ.18 ರಂದು ಅಕ್ರಮವಾಗಿ ಇ- ಸಿಗರೇಟ್ ಸಂಗ್ರಹ ಹಾಗೂ ವಿದೇಶಿ ಕಂಪನಿಯ ಸಿಗರೇಟ್‌ಗಳನ್ನು ಎಂಆರ್‌ಪಿ ದರ ನಮೂದಿಸದೇ ಕೋಟ್ಪಾ ಕಾಯಿದೆ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಮಣಿಪಾಲದ ಶೀಶಾ ಪ್ಯಾರಡೈಸ್ ಮತ್ತು ಸ್ಮೋಕ್ ಕೋ ಎಂಬ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.
ಈ ಎರಡೂ ಅಂಗಡಿಗಳಿಂದ 1,50,000 ರೂ. ಮೌಲ್ಯದ 113 ನಾಧಿನಾ ಕಂಪನಿಯ ನಿಷೇದಿತ ಇ- ಸಿಗರೇಟ್‌ಗಳು ಹಾಗೂ 5,000 ರೂ. ಮೌಲ್ಯದ ವಿದೇಶಿ ಕಂಪನಿಯ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಒಟ್ಟು 1,55,000 ರೂ. ಆಗಿದೆ.
