ಕ್ರೈಂ ಸುದ್ದಿ

ರೌಡಿ ಶೀಟರ್ ‘ಗಾರ್ ಮಂಜ’ ಬಂಧಿಸಿದ ದಾವಣಗೆರೆಯ ಕೆಟಿಜೆ ನಗರ್ ಪೋಲೀಸ್

 

ದಾವಣಗೆರೆ : ಏಕಾಏಕಿ ಮನೆಗೆ ಬಂದು ದಬ್ಬಾಳಿಕೆ ಮಾಡಿ, ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡುವುದಾಗಿ ಬೆದರಿಸಿದ ವ್ಯಕ್ತಿಗಳ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ktj nagara police station ಪ್ರಕರಣ ದಾಖಲಾಗಿ ರೌಡಿ ಶೀಟರ್ ಗಾರ್ ಮಂಜ rowdy sheeter Gar Manja arrest ಅಲಿಯಾಸ್ ಮಂಜುನಾಥ್ ರನ್ನ ಬಂಧಿಸಲಾಗಿದೆ.

ದಾವಣಗೆರೆ ನಗರದ ಮೌನೇಶ್ವರ ಬಡಾವಣೆ ನಿವಾಸಿ ಶ್ರೀಮತಿ ಚಂದ್ರಕಲಾ ಗಂಡ ರಾಹುಲ್ ಎಂಬುವವರು ದೂರು ದಾಖಲಿಸಿದ್ದಾರೆ. ದೂರುದಾರರ ಪತಿ ರಾಹುಲ್ ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾರೆ ಏಪ್ರಿಲ್ 24, 2022 ರಂದು ನನ್ನ ಗಂಡ ರಾಹುಲ್ ಮಾರ್ಕೆಟ್ ಗೆ ಹೋಗಿದ್ದ ಸಂದರ್ಭದಲ್ಲಿ ಗಾರ್ ಮಂಜ, ಮರಿದೇವ ಹಾಗೂ ಇತರರೊಂದಿಗೆ ನಮ್ಮ ಮನೆಗೆ ನುಗ್ಗಿದ್ದು ದಾಂಧಲೆ ನಡೆಸಿದ್ದಾರೆ. ಈ ವೇಳೆ ನೀವು ಯಾರು ಎಂದು ಕೇಳಿದ್ದಕ್ಕೆ ನಾನು ಗಾರೆ ಮಂಜ ರೌಡಿ ಶೀಟರ್. ನಿನ್ನ ಗಂಡ ರಾಹುಲ್ ಎಲ್ಲಿದ್ದಾನೆ ಅವನನ್ನು ಬಿಡುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ.

ನನ್ನ ಗಂಡ ಮಾರ್ಕೆಟ್ ಗೆ ಹೋಗಿದ್ದಾನೆ. ನೀವ್ಯಾಕೆ ನಮ್ಮ ಮನೆಗೆ ನುಗ್ಗಿದ್ದೀರಿ ಅಂತಾ ಪ್ರಶ್ನೆ ಮಾಡಿದ್ದಕ್ಕೆ, ನಿನ್ನ ಗಂಡ ಸಾಲು ಮನೆ ಬಸವರಾಜ ಎಂಬುವವನ ಗಲಾಟೆ ವಿಚಾರವಾಗಿ ಅವನ ಪರ ಇರುತ್ತಾನೆ ಅವನನ್ನು ಬಿಡುವುದಿಲ್ಲ ಅವನನ್ನು ಹುಡುಕಿ ಮುಗಿಸುತ್ತೇವೆ ಅಂತಾ ಅವಾಚ್ಯ ಶಬ್ದವನ್ನು ಬಳಸಿ ಮಾತನಾಡಿ ನಮ್ಮ ಮನೆಯಲ್ಲೆಲ್ಲಾ ನನ್ನ ಗಂಡನನ್ನು ಹುಡುಕಾಡಿದರು.

ನೀವು ಹಿಂಗ್ಯಾಕೆ ನಮ್ಮ ಮನೆಗೆ ನುಗ್ಗಿ ಗಲಾಟೆ ಮಾಡುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ ಗಾರೆ ಮಂಜ, ಮರಿದೇವ ಹಾಗೂ ಇತರೆಯವರು ನನಗೆ ಹಿಡಿದು ಎಳೆದಾಡಿ ಆಶ್ಲೀಲ ಪದಗಳನ್ನ ಬಳಸಿ ಬೈದಾಡಿ ಕೈ ಕಾಲುಗಳಿಂದ ಹೊಡೆದರು. ಆಗ ನಾನು ಜೋರಾಗಿ ಕೂಗಾಡಿಕೊಂಡಾಗ ಅಕ್ಕಪಕ್ಕದವರು ಬಂದಿದ್ದು, ನಿನ್ನ ಗಂಡ ಎಲ್ಲಿದ್ದರೂ ಬಿಡುವುದಿಲ್ಲ ಮುಗಿಸುತ್ತೇವೆ ಅಂತಾ ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾರೆ,

ನಂತರ ನನ್ನ ಗಂಡನಿಗೆ ವಿಚಾರ ತಿಳಿಸಿ ನಾವೆಲ್ಲರೂ ಭಯ ಪಟ್ಟುಕೊಂಡು ಕೆಟಿಜೆ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇವೆ. ನಮ್ಮ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದಾಡಿ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ.

ಚಂದ್ರಕಲಾ ನೀಡಿದ ದೂರಿನ ಮೇರೆಗೆ ಕೆಟಿಜೆ‌ ನಗರ ಪೋಲೀಸ್ ಠಾಣೆಯಲ್ಲಿ ಗಾರೆ ಮಂಜ ಹಾಗೂ ಇತರರ ವಿರುದ್ದ ಕಲಂ 143, 147, 323, 448, 354(ಬಿ) 504, 506 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಲಾಗಿದೆ.

garudavoice21@gmail.com 9740365719

 

 

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!