ಶ್ರೀ ಸಂತ ಸೇವಾಲಾಲ್ ಕ್ಷೇತ್ರದ ಅಭಿವೃದ್ದಿಗೆ ರೂ.10 ಕೋಟಿ ಅನುದಾನ:ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

Rs.10 crore grant for the development of Sri Sant Sewalal Constituency: Chief Minister Basavaraja Bommai

ಸಂತ ಸೇವಾಲಾಲ್

ದಾವಣಗೆರೆ : ಸೂರಗೊಂಡನಕೊಪ್ಪದ ಶ್ರೀಸಂತಸೇವಾಲಾಲ್ ಕ್ಷೇತ್ರದ ಅಭಿವೃದ್ದಿಗೆ ರೂ.10ಕೋಟಿ ಅನುದಾನವನ್ನು ಪ್ರಾಧಿಕಾರಕ್ಕೆ ಕಾಯ್ದಿರಿಸಿ ಬಿಡುಗಡೆ ಮಾಡುವುದಾಗಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಘೋಷಿಸಿದರು.

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಸಂತಸೇವಾಲಾಲ್ ಅವರ 284ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಬಂಜಾರ ಸಮಾಜ ವೈಶಿಷ್ಠ ಪೂರ್ಣವಾದ ಸಮಾಜ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹರಡಿರುವ ಏಕೈಕ ಸಮಾಜ, ಅತ್ಯಂತ ಬುದ್ದಿವಂತ ಸಮಾಜ ಎಲ್ಲ ರಂಗದಲ್ಲೂ ಈ ಸಮಾಜದವರು ಸಾಧನೆ ಮಾಡಿದ್ದಾರೆ ಎಂದರು.

ನಿಮ್ಮ ಬುದ್ದಿವಂತಿಕೆಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೆ  ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.03 ರಿಂದ 07 ರವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಸಮಾಜದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಬಹು ದೊಡ್ಡ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಬಂಜಾರ ಸಮುದಾಯದ 50 ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಈಡೇರಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ  ಕಾಳಜಿಯಿಂದ ಸಾಧ್ಯವಾಗಿದೆ. ಯಾದಗಿರಿಯಲ್ಲಿ ಈಗಾಗಲೇ ಕಾರ್ಯಕ್ರಮ ಆಯೋಜಿಸಿ ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀನರೇಂದ್ರ ಮೋದಿ ಅವರನ್ನು ಆಹ್ವಾನಿಸಿ 52 ಸಾವಿರ ತಾಂಡ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ಬರುವ ಮಾರ್ಚ್ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತಿತವಾಗಿರುವ ತಾಂಡಗಳ 52 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ತಾಂಡದ ಅಭಿವೃದ್ದಿಗೆ ನಮ್ಮ ಸರ್ಕಾರ ವಿಶೇóಷ ಅಧ್ಯತೆ ನೀಡಿದೆ. ತಾಂಡ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ಈ ನಿಗಮದ ಮೂಲಕ ತಾಂಡಗಳ ಅಭಿವೃದ್ದಿಗೆ ರೂ.961 ಕೋಟಿ ಅನುದಾನ ನೀಡಲಾಗಿದೆ. ಎಂದರು

ಸಮಾಜದ ಬೇಡಿಕೆಗೆ ಸರ್ಕಾರ ಎಲ್ಲ ನೆರವನ್ನು ಒದಗಿಸಲಿದೆ. ಬಂಜಾರ ಸಮುದಾಯದ ಕೆಲಸಕ್ಕೆ ವಲಸೆ ಹೋಗುವ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲೂ ಈ ಸಮುದಾಯದ ಜನಸಂಖ್ಯೆ  ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ವಸತಿ ಶಾಲೆಗಳನ್ನು ಆರಂಭಿಸಲಾಗುವುದು. ವಿಶೇಷ ಅಭಿವೃದ್ದಿ ಅನುದಾನದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿರುವ ಗ್ರಾಮಗಳ ವಸತಿ ರಹಿತಗಿ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಲೀಡಕರ್ ಮಾದರಿಯಲ್ಲಿ ಶೇಡ್ ಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಾ ಪ್ರದೇಶದಲ್ಲಿ ಹೆರಿಟೇಜ್ ವಿಲೇಜ್ ಸ್ಥಾಪನೆ, ಬೀದರ್‍ನಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆಗೆ ಕಾಯಕಯೋಜನೆಯಡಿ ಬಂಜಾರ ಕೌಶಲ್ಯಾಗಳ ಪ್ರೋತ್ಸಾಹಕ್ಕೆ ತಲಾ 50 ಸಾವಿರ ನೆರವು ಸೇರಿದಂತೆ ಈ ಸಮಾಜದ ಅಭಿವೃದ್ದಿಗೆ ಸರ್ಕಾರ ಎಲ್ಲ ಅವಕಾಶಗಳನ್ನು ಒದಗಿಸಲಿದೆ  ನಿಮ್ಮ ಅಭಿವೃದ್ದಿಯಲ್ಲಿ ನಮ್ಮ ಸರ್ಕಾರ ನಿಮ್ಮ ಜೊತೆಯಲ್ಲಿ ಇರಲಿದೆ. ಎಂದರು

ಬದಲಾವಣೆ ಕಾಲದಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಜಾಗೃತರಾಗಿರಿ. ನಿಮ್ಮ ಬೆನ್ನುಲುಬಾಗಿ ನಿಂತವರ ಜೊತೆಯಲ್ಲಿ ಇರಿ. ನಿಮ್ಮ ಸಮಾಜಕ್ಕೆ ಸರಸ್ವತಿ ವಲಿದ್ದಿದ್ದಾಳೆ ಅದನ್ನು ಸದುಪಯೋಗ ಮಾಡಿಕೊಂಡು ಆಕಾಶದ ಎತ್ತರಕ್ಕೆ ಬೆಳಿಯಿರಿ ಎಂದು ಹಾರೈಸಿದರು

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ ಬಂಜಾರ ಸಮುದಾಯದ ಅಭಿವೃದ್ದಿಗೆ ನಮ್ಮ ಸರ್ಕಾರ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ಮಾಡಲಿದೆ ಈಗಾಗಲೇ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ ಮುಂದಿನ ದಿನಗಳಲ್ಲಿ 50 ಸಾವಿರ ಫಲಾನುಭವಿಗಳಿಗೆ ದಾವಣಗೆರೆ ಭಾಗದಲ್ಲಿ ಹಕ್ಕುಪತ್ರ ನೀಡಲಾಗುವುದು. ಶಿವಮೊಗ್ಗ ರಾಣೇಬೆನ್ನೂರು ರೈಲು ಮಾರ್ಗದ ಭಾಯ್‍ಗಾಡದಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ರೈಲು ನಿಲ್ದಾಣವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ,ಕುಡುಚಿ ಶಾಸಕರಾದ ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ರುದ್ರಪ್ಪ ಎಂ ಲಮಾಣಿ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಶಾಸಕರಾದ ಚಂದ್ರನಾಯ್ಕ್, ಮಾಜಿ ಶಾಸಕ ಬಸವರಾಜ ಇತರ ಮುಖಂಡರು ಹಾಗೂ ಬಂಜಾರ ಸಮುದಾಯದ  ಶ್ರೀಗಳು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!