ಯುದ್ದ ಮಾಡದೆ ವಾಪಸಾದ್ರೆ ರಷ್ಯಾ ಸೈನಿಕರಿಗಿಲ್ಲವಂತೆ ಉಳಿಗಾಲ,! ರಷ್ಯಾ ಸೈನಿಕರಿಗೆ ವ್ಲಾಡಿಮಿರ್ ಪುಟಿನ್ ಮಾಡುತ್ತಿದ್ದಾರಂತೆ ಮಹಾಮೋಸ!
ಬೆಂಗಳೂರು : ಉಕ್ರೇನ್ ಸೈನಿಕರ ಕೈಗೆ ಸಿಕ್ಕಿಬಿದ್ದ ರಷ್ಯಾ ಸೈನಿಕನೊಬ್ಬ ಪುಟೀನ್ ಕುರಿತ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದು, ವ್ಲಾಡಿಮಿರ್ ಪುಟಿನ್‌ರ ಒಂದೊಂದೇ ಭಯಾನಕ ಮುಖಗಳು ಬೆಳಕಿಗೆ ಬರುತ್ತಿದೆ. ಹೌದು, ರಷ್ಯಾ ಸೈನಿಕ ಉಕ್ರೇನ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದು ಹಲವು ಮಾಹಿತಿಗಳನ್ನು ಹೇಳಿದ್ದಾನೆ. “ನಾವು ಯುದ್ಧ ಮಾಡದೇ ರಷ್ಯಾಗೆ ವಾಪಸ್ ಹೋಗಲು ಸಾಧ್ಯವಿಲ್ಲ. ಹಾಗೆ ವಾಪಸ್ ಹೋಗುವ ಸೈನಿಕರನ್ನು ಹತ್ಯೆ ಮಾಡುವುದಕ್ಕೆ ಅಂತಾನೇ ಪುಟಿನ್ ಡೆತ್ ಸ್ಕ್ವಾಡ್ ಅನ್ನು ನೇಮಿಸಿದ್ದಾರೆ. ಇದೇ ಕಾರಣಕ್ಕೆ ಹಲವರು ಇಲ್ಲೇ ಶರಣಾಗಿದ್ದಾರೆ ಎಂದು ಹೇಳಿದ್ದಾನೆ. ಅಷ್ಟೆ ಅಲ್ಲದೆ ಯಾರಾದರೂ ಯುದ್ಧವನ್ನು ಬಿಟ್ಟು, ಸೇನೆಯನ್ನು ಬಿಟ್ಟು ವಾಪಸ್ಸಾಗಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ ಅಂತ ನಮ್ಮ ಸೈನಿಕರಿಗೆ ಎಚ್ಚರಿಸಲಾಗಿದೆ. ಯುದ್ಧದ ಕುರಿತ ಅಂತರಾಷ್ಟಿಯ ಮಾಧ್ಯಮಗಳ ವರದಿಯನ್ನು ನೋಡದಂತೆ ತಡೆಯಲು ಸೈನಿಕರ ಮೊಬೈಲ್‌ಗಳನ್ನು ಕಿತ್ತಿಟ್ಟುಕೊಳ್ಳಲಾಗಿದೆ ಎಂದು ರಷ್ಯಾ ಸೈನಿಕ ಹೇಳಿಕೊಂಡಿದ್ದಾನೆ.
ನಮ್ಮನ್ನು ಪೀಸ್ ಕೀಪಿಂಗ್ ಮಿಷನ್‌ಗೆ ಕಳುಹಿಸುತ್ತಿರುವುದು ನಾಝಿಗಳ ಹಿಡಿತದಿಂದ ಉಕ್ರೇನನ್ನು ಫ್ರೀ ಮಾಡಲು ಎಂದು ಹೇಳಲಾಗಿತ್ತು. ಆದರೆ ನಾವಿಲ್ಲಿ ಬಂದ ಬಳಿಕ ನಮಗೆ ಅರ್ಥವಾಯ್ತು.. ಪೀಸ್‌ಕೀಪಿಂಗ್‌ಗೆ ಕಳುಹಿಸಿರೋದಲ್ಲ.. ಬದಲಿಗೆ ಯುದ್ಧಕ್ಕೆ ಕಳುಹಿಸಿರೋದು ಅನ್ನೋದು. ನಾವು ನಮ್ಮ ಕಮಾಂಡರ್ ಬಳಿ ನಾವ್ಯಾಕೆ ಈ ಯುದ್ಧ ಮಾಡ್ತಿದ್ದೀವಿ ಅಂತ ಪ್ರಶ್ನಿಸಿದ್ವಿ.. ಆಗ ನಮ್ಮ ಮೊಬೈಲ್‌ಗಳನ್ನು ಕೂಡ ಕಿತ್ತಿಟ್ಟುಕೊಂಡ್ರು. ವಾಪಸ್ ಹೋಗೋ ಮಾತಾಡಿದ್ರೆ ಕೊಲ್ತೀವಿ ಅಂತ ಬೆದರಿಸಿದರು. ಜೊತೆಗೆ ನಮಗೆ ಸರೆಂಡರ್ ಆಗೋದು ಬಿಟ್ಟು ಬೇರೆ ಯಾವುದೇ ದಾರಿ ಇರಲಿಲ್ಲ. ಈಗ ಸೆರೆಯಾಗಿರೋ ರಷ್ಯನ್ ಸೈನಿಕರು ಸಾವನ್ನಪ್ಪಿಯಾಗಿದೆ ಅಂತ ರಷ್ಯಾ ಸರ್ಕಾರ ಪರಿಗಣಿಸಿದೆ. ನಾನು ನನ್ ಮನೆಗೆ ಕಾಲ್ ಮಾಡಿದಾಗ ನನ್ನ ಅಂತ್ಯಸಂಸ್ಕಾರಕ್ಕೆ ಅರೇಂಜ್ ಮಾಡಲಾಗಿದೆ ಅಂತ ಮಾಹಿತಿ ಸಿಕ್ತು. ಒಂದ್ವೇಳೆ ಈಗ ನಮ್ಮನ್ನು ವಾಪಸ್ ಕಳುಹಿಸಿದ್ರೂ ಕೂಡ ನಮ್ಮವರೇ ಕೊಲ್ತಾರೆ ಅಂತ ದುಃಖಿತನಾಗಿದ್ದಾನೆ. ಇನ್ನು ಈವರೆಗೆ ಹಲವಾರು ರಷ್ಯನ್ ಸೈನಿಕರು ಉಕ್ರೇನ್‌ನಲ್ಲಿ ಸೆರೆಯಾಗಿದ್ದು, ಅವರಲ್ಲಿ ಹಲವರು ನಮಗೆ ಬಲವಂತವಾಗಿ ಈ ಯುದ್ಧವನ್ನು ಮಾಡಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಈ ರಷ್ಯನ್ ಸೈನಿಕ ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾನೆ.
ಇನ್ನು ಮತ್ತೋರ್ವ ಕಮಾಂಡರ್ ಮಾತನಾಡಿ, ಮೂರು ದಿನಗಳ ಒಳಗಾಗಿ ಖಾರ್ಕಿವ್ ನಗರವನ್ನು ವಶಕ್ಕೆ ಪಡೆಯಲು, ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲು ತಂಡ ಕಳುಹಿಸಲಾಗಿತ್ತು ಅಂತ ಹೇಳ್ಕೊಂಡಿದ್ದಾರೆ. ಅಲ್ಲದೆ ನಾವು ಯುಕ್ರೇನ್ ನಾಗರಿಕರನ್ನು ರಕ್ಷಿಸಲು ಯತ್ನಿಸಿದ್ರೆ ನಮ್ಮ ಮೇಲೆಯೇ ದಾಳಿ ನಡೆಸಲು ಆದೇಶ ನೀಡಲಾಗಿದೆ. ಯಾರಾದ್ರೂ ರಕ್ಷಣೆಗೆ ಹೋದ್ರೆ ಅವರನ್ನೇ ಗುಂಡಿಟ್ಟು ಹತ್ಯೆ ಮಾಡಲಾಗ್ತಿದೆ ಅಂತಲೂ ಸೆರೆಯಾದ ರಷ್ಯನ್ ಸೈನಿಕರು ಮಾಹಿತಿ ನೀಡಿದ್ದಾರೆ.