ತುಂಡುಡುಗೆ ಶಾರ್ಟ್ ಡ್ರೆಸ್ ಧರಿಸುವವರ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದೇನು?
ಹೆಚ್ಚಾಗಿ ಸೀರೆ, ಸೆಲ್ವಾರ್ ನಲ್ಲೇ ಕಂಗೊಳಿಸುವ ನಟಿ ಸಾಯಿ ಪಲ್ಲವಿ ಅವರು ಸೀರೆಗೆ ತುಂಬಾ ಖ್ಯಾತಿ ಪಡೆದಿದ್ದಾರೆ. ಸಿನಿಮಾ ಮಾತ್ರವಲ್ಲ ನಿಜ ಜೀವನದಲ್ಲೂ ಅವರು ಸೀರೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇವರು ಸೀರೆ ಉಟ್ಟು ಬಂದರೆ ಬಾಲಿವುಡ್ನಿಂದ ಟಾಲಿವುಡ್ ತನಕ ಎಲ್ಲರೂ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸುತ್ತಾರೆ.
ಸಾಯಿ ಪಲ್ಲವಿ ಈಗ ಶಾರ್ಟ್ ಡ್ರೆಸ್ ಧರಿಸುವವರ ಬಗ್ಗೆ ಮಾತನಾಡಿದ್ದು, ವೈರಲ್ ಆಗಿದೆ.
ನಾನು ಪೂರ್ತಿ ಮೈ ಮುಚ್ಚುವ ದಿರಿಸು ಧರಿಸುತ್ತೇನೆ ಎಂದರೆ ಒಳ್ಳೆಯವಳು ಅಥವಾ ಚಿಕ್ಕ ಚಿಕ್ಕ ಶಾರ್ಟ್ ಡ್ರೆಸ್, ಮಾಡರ್ನ್ ಡ್ರೆಸ್ ಧರಿಸುವವರು ಕೆಟ್ಟವರು ಎಂದರ್ಥವಲ್ಲ. ಯಾವತ್ತೂ ಹೆಣ್ಣನ್ನು ಆ ರೀತಿ ನೋಡುವುದೇ ತಪ್ಪು ಎಂದು ಅವರು ಹೇಳಿದ್ದಾರೆ.
ನಾಳೆ ನನಗೊಬ್ಬಳು ಮಗಳು ಹುಟ್ಟಿದರೆ ಅವಳು ಮಾಡರ್ನ್ ಡ್ರೆಸ್ ಇಷ್ಟ ಪಡಬಹುದು. ಅದು ಅವಳಿಗೆ ಕಂಫರ್ಟಬಲ್ ಆಗಬಹುದು. ಮಗು ಆ ರೀತಿ ಡ್ರೆಸ್ ಮಾಡಿದಾಗ ಜಗತ್ತಿನಲ್ಲಿರುವ ಎಲ್ಲರೂ ನನ್ನನ್ನು ಅಮ್ಮ ನೋಡಿದಂತೆಯೇ ನೋಡುತ್ತಾರೆ. ಯಾರೂ ನನ್ನನ್ನು ಕೆಟ್ಟದಾಗಿ ನೋಡಲಾರರು ಎಂಬ ನಂಬಿಕೆ ಮಗುವಿನಲ್ಲಿ ಇರುತ್ತದೆ. ಅದನ್ನು ನಾನು ಹಾಳು ಮಾಡಲಾರೆ ಎಂದು ಅವರು ತಿಳಿಸಿದ್ದಾರೆ.
ನೀನು ಪೂರ್ತಿ ಮೈಮುಚ್ಚುವ ದಿರಿಸು ಧರಿಸು. ಆ ಅಂಕಲ್ ಏನಾದರೂ ಮಾಡಬಹುದು, ಆ ಆಂಟಿ ಏನಾದರೂ ಹೇಳಬಹುದು ಎಂದು ಮುಗ್ದ ಮಗುವಿನ ಮನದಲ್ಲಿ ನಾನು ಸಂದೇಹದ ಬೀಜ ಬಿತ್ತಲು ಬಿಡುವುದಿಲ್ಲ. ಹೆಣ್ಣನ್ನು ಆಕೆ ಧರಿಸುವ ಉಡುಗೆಯಿಂದ ಜಡ್ಜ್ ಮಾಡಬಾರದು ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.
ಸದ್ಯ ಸಿನಿಮಾದಿಂದ ಚಿಕ್ಕ ಬ್ರೇಕ್ ತೆಗೆದುಕೊಂಡಿರುವ ನಟಿ ಚೆನ್ನೈನಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. ಮುಂದೆ ಹಿಂದಿಯಲ್ಲಿ ಬರಲಿರುವ ರಾಮಾಯಣ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.