ಸಂತ ಶ್ರೀ ಸೇವಾಲಾಲ್ ಜಯಂತಿ: 13ರಂದು ಶ್ರೀ ಸಂತ ಬಾಬು ಸಿಂಗ್ ಮಹಾರಾಜ್‌ರಿಂದ ಪ್ರವಚನ

ಶ್ರೀ ಸೇವಾಲಾಲ್ ಜಯಂತಿ
ದಾವಣಗೆರೆ : ಸಂತ ಶ್ರೀ ಸೇವಾಲಾಲ್ 284ನೇ ವರ್ಷದ ಜಯಂತಿ ಅಂಗವಾಗಿ ಬಿ.ಜಿ. ಚಂದ್ರಶೇಖರ್ ವಕೀಲರು ಮತ್ತು ಸ್ನೇಹಿತರ ಬಳಗದಿಂದ ಆನಗೋಡು ಶ್ರೀ ಮರುಳಸಿದ್ದೇಶ್ವರ ಸಮುದಾಯ ಭವನದಲ್ಲಿ ಶ್ರೀ ಸಂತ ಬಾಬು ಸಿಂಗ್ ಮಹಾರಾಜ್ ಪೌರಾದೇವಿ (ಪೌರಗಡ) ಮಹರಾಷ್ಟ್ರ ಇವರಿಂದ ಆಶೀರ್ವಚನ ಹಾಗೂ ಮಕ್ಕಳಿಗೆ ಲೇಖನಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಕೀಲ ಎಂ.ಎನ್. ಆಂಜನೇಯ, ಫೆ.13ರ ಸೋಮವಾರ ಮಧ್ಯಾಹ್ನ 3ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಬಾಬುಸಿಂಗ್ ಮಹಾರಾಜ್ ವಹಿಸಲಿದ್ದು, 500ಕ್ಕೂ ಹೆಚ್ಚು ಮಕ್ಕಳಿಗೆ ಲೇಖನಾ ಸಾಮಗ್ರಿ ವಿತರಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು.
ಮಾಜಿ ಸಚಿವರುಗಳಾದ ಸಂತೋಷ್ ಲಾಡ್, ರುದ್ರಪ್ಪ ಲಂಬಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.