ಲೋಕಲ್ ಸುದ್ದಿ

ಪರಿಸರ ರಕ್ಷಣೆಯ ಜಾಗೃತಿ ನಿಮಿತ್ತ ಗಿಡ ನೆಟ್ಟ ಸಾಲುಮರದ ತಿಮ್ಮಕ್ಕ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಸರ ದಿನಾಚರಣೆ

Salumarada Thimmakka planted saplings for awareness of environmental protection:

ದಾವಣಗೆರೆ: ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪರಿಸರ ದಿನಾಚರಣೆಯ ನಿಮಿತ್ತ ಭೇಟಿ ನೀಡಿದ ಪದ್ಮಶ್ರೀ ಪುರಸ್ಕೃತ ಪರಿಸರದ ಪ್ರೇಮಿ ಸಾಲುಮರದ ತಿಮ್ಮಕ್ಕ ಗಿಡ ನೆಟ್ಟು ಮಾತನಾಡಿದ ತಿಮ್ಮಕ್ಕ. ಪರಿಸರ ನಾಶದಿಂದ ಜಗತ್ತು ಅಪಾಯಕಾರಿ ಸ್ಥಿತಿ ತಲುಪಿದೆ. ಶುದ್ಧ ಗಾಳಿ,ಬೆಳಕು, ನೀರು, ಇಲ್ಲದೆ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಸರ ರಕ್ಷಣೆ ಒಂದೇ ಪರಿಹಾರ ಮಾರ್ಗ ಎಂದು ಕರೆ ನೀಡಿದರು .ತಿಮ್ಮಕ್ಕ ಅವರ ಪುತ್ರ ಉಮೇಶ ಬಳ್ಳೂರ ಮಾತನಾಡಿ ಕಾಡು ಕಡಿದು ನಾಡು ಮಾಡುತ್ತಿದ್ದಾರೆ.ಆದರೆ ಗಿಡಗಳನ್ನು ನೆಡುವುದನ್ನು ಮರೆಯುತ್ತಿದ್ದಾರೆ ,ನಮ್ಮ ಮಕ್ಕಳನ್ನು ಕಾಪಾಡಿದಂತೆ ಗಿಡಗಳನ್ನು ನೆಟ್ಟು ಪೋಷಿಸಿದರೆ ಎಲ್ಲರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿ ಹೆಳಿದರು .ಪ್ರಾಂಶುಪಾಲರಾದ ಡಾ.ಎಸ್.ಆರ್.ಅಂಜನಪ್ಪ ಮಾತನಾಡಿ ಪರಿಸರ ರಕ್ಷಣೆಯ ಜಾಗೃತಿ ಮೂಡಿಸಲು ತಮ್ಮ 112ನೇ ವಯಸ್ಸಿನಲ್ಲಿ ದನವರಿಯದಂತೆ ಜನರಿಗೆ ಪ್ರೇರಣೆ ನೀಡುತ್ತಿರುವ ತಿಮ್ಮಕ್ಕ ಅವರ ಸೇವೆ ಸ್ಮರಣೀಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ತಿರುಮಲ, ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ,ಪ್ರೊ. ಭೀಮಣ್ಣ ಸುಣಗಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರುದ್ರಪ್ಪ, ಪ್ರೊ. ಮಂಜಣ್ಣ, ಪ್ರೊ. ಸೋಮಶೇಖರ್, ಪ್ರೊ. ಜಕ್ಕವ್ವನವರ ಮಂಜುನಾಥ, ಪ್ರೊ. ರಾಜಕುಮಾರ ಹಾಗೂ ಬೋಧಕ/ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top