ಒಂದೇ ದಿನ 81 ಮಂದಿಗೆ ಮರಣದಂಡನೆ ನೀಡಿದ ಸೌದಿ ಅರೇಬಿಯಾ
ಬೆಂಗಳೂರು : ಮಹಿಳೆಯರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ 81 ಮಂದಿಯನ್ನು ಶನಿವಾರ ಸೌದಿ ಅರೇಬಿಯ ರಾಜಾಡಳಿತ ‘ಮರಣ ದಂಡನೆ’ಗೆ ಗುರಿಪಡಿಸಿದೆ. ಒಂದೇ ದಿನ 81 ಮಂದಿಯನ್ನು ಮರಣ ದಂಡನೆಗೆ ಗುರಿಪಡಿಸಿರುವುದು ಇದೇ ಮೊದಲು. ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆ ಹೊಸದೇನಲ್ಲ. ಈ ಹಿಂದೆ ಮೆಕ್ಕಾದ ಮಸೀದಿಯ ಮೇಲೆ ದಾಳಿ ಮಾಡಿದ್ದ ಪ್ರಕರಣದಲ್ಲಿ 63 ಉಗ್ರರನ್ನು 1980ರ ದಿನವೊಂದರಲ್ಲಿ ಮರಣ ದಂಡನೆ ಮೂಲಕ ಸಾಯಿಸಲಾಗಿತ್ತು. ಸೌದಿ ಅರೇಬಿಯಾವು ತನ್ನ ಪಕ್ಕದ ರಾಷ್ಟç ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಸೆಣೆಸುತ್ತಿದ್ದದ್ದು, ಈಗ ಸೌದಿಯಲ್ಲಾಗಿರುವ ಮರಣ ದಂಡನೆಗೆ ಸಂಬಂಧವಿದೆ ಎಂದು ಹೇಳಲಾಗಿದೆ. ಮರಣದಂಡನೆಗೆ ಒಳಗಾದವರಲ್ಲಿ 73 ಸೌದಿಗಳು, 7 ಯೆಮನಿಯರು, ಒಬ್ಬ ಸಿರಿಯನ್ ಇದ್ದಾರೆ.