ಮೋದಿ ಆಗಮನಕ್ಕೆ ಸೆಕ್ಯೂರಿಟಿ ಫುಲ್ ಟೈಟ್

ಮೋದಿ ಆಗಮನಕ್ಕೆ ಸೆಕ್ಯೂರಿಟಿ ಪುಲ್ ಟೈಟ್

ದಾವಣಗೆರೆ: ಪ್ರಧಾನಿ ಮೋದಿ ಮಹಾಸಂಗಮದ ಎಲ್ಲ ಕೆಲಸಗಳು ಸರಾಗಾವಾಗಿ ನಡೆದಿದ್ದುಘಿ, ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ದಾವಣಗೆರೆಯಲ್ಲಿ ಎಡಿಜಿಪಿ ಆಲೋಕ್ ಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಭದ್ರತೆ ಪರಿಶೀಲನೆ ನಡೆಸಲಾಗಿದೆ. 2500 ಪೊಲೀಸ್ ಸಿಬ್ಬಂದಿ, 600 ಟ್ರಾಫಿಕ್ ಪೊಲೀಸ್ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಪಿಯುಸಿ ಪರೀಕ್ಷೆ ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಯಾರಿಗಾದರೂ ತೊಂದರೆ ಆದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ಪರೀಕ್ಷೆ ಬಗ್ಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದರು.

ಮೋದಿ ಆಗಮನಕ್ಕೆ ಸೆಕ್ಯೂರಿಟಿ ಪುಲ್ ಟೈಟ್
ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ವೇದಿಕೆಗೆ ಜನರ ಮಧ್ಯೆ ಬರುತ್ತಿದ್ದಾರೆ. ವೇದಿಕೆ ಮಧ್ಯ ಭಾಗದಲ್ಲಿ ವಾಹನ ಚಲಿಸುವಷ್ಟು ಜಾಗ ಬಿಟ್ಟಿದ್ದೇವೆ. ಜನರ ಬಳಿ ಮೋದಿ ಹೋಗುತ್ತಾರೆ ಐಪಿಎಸ್ ದರ್ಜೆಯ 8 ಅಧಿಕಾರಿಗಳು, 4000 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಮೋದಿ ಆಗಮನಕ್ಕೆ ಸೆಕ್ಯೂರಿಟಿ ಪುಲ್ ಟೈಟ್

ಖಾಸಗಿ ಬಸ್ ಮತ್ತು ಸರಕಾರಿ ಬಸ್ ನಿಲ್ದಾಣವನ್ನು ನಗರದ ಹೊರವಲಯ ಪಿಬಿ ರೋಡ್‌ನಲ್ಲಿ ಮಾಡಲಾಗಿದೆ. ಜನರು ಬೆಳಗ್ಗೆಯಿಂದ ಸಮಾವೇಶಕ್ಕೆ ಬಂದರೆ ಆದಷ್ಟು ಅನಕೂಲವಾಗಲಿದೆ. ಯಾವುದೇ ನೀರಿನ ಬಾಟಲ್ಗಳನ್ನು ಸಮಾವೇಶದ ಜಾಗಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ವೀಕ್ಷಕರ ಗ್ಯಾಲರಿಗೆ ಬಿಡಲಾಗುತ್ತದೆ ಎಂದರು.
ನಗರದಲ್ಲಿ ಭಾರೀ ವಾಹನಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ನಗರದ ಒಳಗೆ ಪ್ರವೇಶಿಸುವಂತಿಲ್ಲ.

ಮೋದಿ ಆಗಮನಕ್ಕೆ ಸೆಕ್ಯೂರಿಟಿ ಪುಲ್ ಟೈಟ್

ರಾಜ್ಯದ ನಾಲ್ಕು ಭಾಗಗಳಿಂದ ಬರುವ ವಾಹನಗಳಿಗೆ ಹೊರಭಾಗದಲ್ಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ತುಮಕೂರು, ಹಾಸನ, ಕೊಡಗು, ಮಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮೂಲಕ ಬರುವ ವಾಹನಗಳಿಗೆ ಎಪಿಎಂಸಿ, ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೋದಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆನ್ನು ಚನ್ನಗಿರಿ, ಕಡೂರು, ಬೀರೂರು ಕಡೆಯಿಂದ ಹದಡಿ ರಸ್ತೆಯಿಂದ ಬರುವ ವಾಹನಗಳಿಗೆ ಡಿಆರ್‌ಎಂ ಸೈನ್ಸ್ ಕಾಲೇಜ್ ಮತ್ತು ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಮೋದಿ ಆಗಮನಕ್ಕೆ ಸೆಕ್ಯೂರಿಟಿ ಪುಲ್ ಟೈಟ್

ಅಲ್ಲದೆ ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಹಾವೇರಿಯಿಂದ ಹರಿಹರ ಮಾರ್ಗವಾಗಿ ಬರುವ ವಾಹನಗಳಿಗೆ ಕುಂದವಾಡ ಕೆರೆ ಮತ್ತು ಹತ್ತಿರದ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿದೆ. ಬಳ್ಳಾರಿ, ಕೊಪ್ಪಳ, ವಿಜಯನಗರ, ವಿಜಯಪುರ, ಬೀದರ್, ರಾಯಚೂರು, ಕಲಬುರಗಿ, ಗದಗ ಜಿಲ್ಲೆಗಳಿಂದ ಕೊಂಡಜ್ಜಿ ಮಾರ್ಗವಾಗಿ ಬರುವ ವಾಹನಗಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ, ಜಗಳೂರು ರಸ್ತೆ ಮೂಲಕ ಬರುವ ವಾಹನಗಳು ಬಡಗಿ ಕೃಷ್ಣಪ್ಪ ಲೇಔಟ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಸ್ಥಳದ 2 ಕಿಮೀ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!