ಹೊಟ್ಟೆನೊವು, ಮೂಲವ್ಯಾಧಿಗೆ ಮನೆಮದ್ದು ಉಪಯೋಗಿಸಿ ನೋಡಿ
ಅಲೋಪತಿಗಿಂತ ಮನೆಮದ್ದುಗಳಿಂದ ಚಿಕ್ಕ-ಪುಟ್ಟ ಸಮಸ್ಯೆಗಳು ಗುಣಮುಖ ಕಾಣಬಹುದು. ಹೊಟ್ಟೆನೋವು, ಬೇಧಿ ಹಾಗೂ ಮೂಲವ್ಯಾಧಿ ಸಮಸ್ಯೆಗೆ ಇಲ್ಲಿದೆ ಪರಿಹಾರ.
ಬೇಧಿಗೆ ಮನೆಮದ್ದು
ಬೇಧಿಯಾದಾಗ ಮಾಡಬೇಕಾದ ಮನೆಮದ್ದುಗಳೆಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಿರಲು ತುಂಬಾ ನೀರು ಕುಡಿಯುವುದು, ಟೀ ಪುಡಿ ಮತ್ತು ಸಕ್ಕರೆ ಹುರಿದು ಅದಕ್ಕೆ 1/4 ಲೋಟ ನೀರು ಹಾಕಿ ಕುಡಿಯುವುದು, ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು, 2 ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಕುಡಿಯುವುದು, ಮೊಸರನ್ನ ಸೇವನೆ ಇವೆಲ್ಲಾ ಬೇಧಿ ನಿಲ್ಲಲು, ಸುಸ್ತು ಕಡಿಮೆಯಾಗಲು ಸಹಕಾರಿ.
ಬೇಧಿಯಾದಾಗ ಎಣ್ಣೆ ಪದಾರ್ಥಗಳನ್ನು ತಿನ್ನಬಾರದು, ಖಾರದ ಆಹಾರಗಳನ್ನು ತಿನ್ನಬಾರದು, ಕೃತಕ ಸಿಹಿ ಪದಾರ್ಥಗಳನ್ನು ಸೇವಿಸಬಾರದು.
ಹೊಟ್ಟೆ ನೋವಿಗೆ ಮನೆಮದ್ದು
ತುಂಬಾ ಹೊಟ್ಟೆ ನೋವು ಬಂದರೆ ಮನೆಮದ್ದು ಮಾಡುವ ಬದಲಿಗೆ ಆಸ್ಪತ್ರೆಗೆ ಹೋಗುವುದು ಸೂಕ್ತ. ದೇಹದ ಉಷ್ಣಾಂಶ ಹೆಚ್ಚಾದಾಗ, ಮುಟ್ಟಿನ ಸಮಯದಲ್ಲಿ ಕಾಣಿಸುವ ಹೊಟ್ಟೆ ನೋವಾದರೆ ಜೀರಿಗೆ ನೀರು ಸಹಕಾರಿ. ಹೊಟ್ಟೆ ನೋವು ಬಂದಾಗ ಗ್ಯಾಸ್ಟ್ರಿಕ್ ಉತ್ಪತ್ತಿ ಮಾಡುವ ಆಹಾರಗಳನ್ನು, ತರಕಾರಿಗಳನ್ನು ಸೇವಿಸಬೇಡಿ.
ಮೂಲವ್ಯಾಧಿಗೆ ಮನೆಮದ್ದು
ಮೂಲವ್ಯಾಧಿ ಸಮಸ್ಯೆಯಿದ್ದರೆ ಕೂರಲೂ ಆಗದೆ, ಇತ್ತ ನೋವು ಅನುಭವಿಸಲೂ ಸಾಧ್ಯವಾಗದೆ ಒದ್ದಾಡುತ್ತಾರೆ. ಇದರ ಬಗ್ಗೆಯೂ ಜನರು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಮೂಲಂಗಿ ಸೇವನೆ, ಬ್ರೊಕೋಲಿ, ದುಂಡು ಮೆಣಸಿನಕಾಯಿ, ಸೌತೆಕಾಯಿ, ಪಿಯರ್ಸ್, ಸೇಬು, ರಾಸ್‌ಬೆರ್ರಿ, ಬಾಳೆಹಣ್ಣು ಇಂಥ ಆಹಾರಗಳ ಸೇವನೆ ಒಳ್ಳೆಯದು.