ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಮಾ.೧೮ರಂದು ಆಯ್ಕೆ ಪ್ರಕ್ರಿಯೆ

ದಾವಣಗೆರೆ : ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಹಾಗೂ ರಾಷ್ಟಿಯ ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ಮಾ. ೧೮ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದ ಎದುರುಗಡೆ ಇರುವ ರಂಗ ಮಹಲ್‌ನಲ್ಲಿ ನಡೆಯಲಿದೆ. ಈ ಕುರಿತು ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಸಾಯಿನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸ್ಪರ್ಧೆಗಳಿಗೆ ರಾಜ್ಯದ ಮೈಸೂರು, ಹಾಸನ, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ ಹಾವೇರಿ, ಚಿಕ್ಕಮಗಳೂರು, ಬೆಂಗಳೂರು ಹಾಗೂ ಇನ್ನೂ ಅನೇಕ ಜಿಲ್ಲೆಗಳಿಂದ ೧೮೦ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಸ್ಪರ್ಧೆಗಳಲ್ಲಿ ಪುರುಷ ಹಾಗೂ ಮಹಿಳೆಯರು ಭಾಗವಹಿಸಲಿದ್ದಾರೆ. ಸ್ಪರ್ಧೆಗಳು ೩ ವಯೋಮಾನಗಳಲ್ಲಿ ಅಂದರೆ ಕಿರಿಯ, ಹಿರಿಯ ಮತ್ತು ವಯಸ್ಕರ ವಿಭಾಗಗಳಲ್ಲಿ ನಡೆಯಲಿದೆ.

ಮಾ. ೧೮ರಂದು ಬೆಳಿಗ್ಗೆ ೮ಕ್ಕೆ ಆರಂಭವಾಗಿ ಸಂಜೆ ೮ರ ವರೆಗೆ ಜರುಗಲಿವೆ. ಅದೇ ದಿನ ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಶ್ರೀನಿವಾಸ ದಾಸಕರಿಯಪ್ಪ, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಉದ್ಯಮಿ ಎಂ. ಆನಂದ್ ಆಗಮಿಸುವರು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟಿಯ ಕ್ರೀಡಾಪಟು ಜಿ. ಗೋಪಾಲ್, ಲಕ್ಮೀದೇವಿ ದಯಾನಂದ, ಎಸ್.ಹೆಚ್. ಮಂಜುನಾಥ್, ವಿರೂಪಾಕ್ಷಪ್ಪ, ಬಸವರಾಜ್ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!